ಡಿಕೆಶಿಗೆ 500 ಕೆಜಿ ಸೇಬು ಹಣ್ಣಿನ ಹಾರ

15 smg 12
Published on

ಶಿವಮೊಗ್ಗ: ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗಕ್ಕೆ ಬಂದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಬರೋಬ್ಬರಿ 500 ಕೆಜಿ ಸೇಬು ಹಣ್ಣಿನ ಮಾಲೆ ಹಾಕುವ ಮೂಲಕ ಅಭಿಮಾನ ಮೆರೆದರು.

ನವುಲೆಯಲ್ಲಿ ಸಂಜೆ 5 ಗಂಟೆಯಿಂದಲೇ ನೂರಾರು ಅಭಿಮಾನಿಗಳು ಕಾದು ಕುಳಿತಿದ್ದರು. ಶಿಕಾರಿಪುರ ಮತ್ತು ಕುಂಚೇನಹಳ್ಳಿಯಲ್ಲಿ ಬಂಜಾರ ಸಮುದಾಯದ ಸಮಸ್ಯೆಗಳನ್ನು ಆಲಿಸಿ ಡಿ.ಕೆ.ಶಿವಕುಮಾರ್ ಬರುವಷ್ಟರಲ್ಲಿ ರಾತ್ರಿ 9.30 ಆಗಿತ್ತು. ಅಲ್ಲಿವರೆಗೂ ಕಾದಿದ್ದ ಅಭಿಮಾನಿಗಳು ಕ್ರೇನ್ ಮೂಲಕ ನೆಚ್ಚಿನ ನಾಯಕನಿಗೆ ಸೇಬು ಹಣ್ಣಿನ ಮಾಲೆ ಹಾಕಿ ಖುಷಿ ಪಟ್ಟರು. ಇದರಿಂದ ಶಿವಮೊಗ್ಗ-ಹೊನ್ನಾಳ್ಳಿ ರಸ್ತೆಯಲ್ಲಿ ಅರ್ಧ ಗಂಟೆಗೂ ಅಧಿಕ ಟ್ರಾಫಿಕ್ ಜಾಮ್ ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net