ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿ

13sor1
Published on

ಸೊರಬ: ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಅಧ್ಯಕ್ಷ ಎಂ.ಆರ್.ಅಶೋಕ್ ಹೆಗಡೆ ಅವರನ್ನು ಮಳಲಗದ್ದೆ ಪಿಎಸಿಎಸ್ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಲಾಯಿತು.

ಅಶೋಕ ಹೆಗಡೆ ಮಾತನಾಡಿ, ಚುನಾವಣೆಯಲ್ಲಿ 15 ಮತಗಳಲ್ಲಿ 13 ಮತ ಪಡೆದು ಆಯ್ಕೆಯಾಗಿದ್ದೇನೆ. ಎಲ್ಲರ ಸಹಕಾರದಿಂದ ಮೂರು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 25 ವರ್ಷದಿಂದ ಮಳಲಗದ್ದೆ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ಮೇಲೆ ಸಹಕಾರ ಸಂಘ ಇಟ್ಟಿರುವ ನಂಬಿಕೆ, ವಿಶ್ವಾಸದೊಂದಿಗೆ ಎಲ್ಲರ ಸಹಕಾರ ಪಡೆದು ಸಂಘದ ಅಭಿವೃದ್ಧಿ ಮತ್ತು ರೈತರ ಹಿತ ಕಾಯುಲು ಶ್ರಮಿಸುತ್ತೇನೆ ಎಂದರು.

ಉಪಾಧ್ಯಕ್ಷ ಕೆ.ಎಚ್.ಭೈರಪ್ಪ, ನಿರ್ದೇಶಕರಾದ ನಾರಾಯಣ, ತಾರಕೇಶವ, ಬಿ.ಕೆ.ಭಾಸ್ಕರ್, ಎಂ.ಬಿ.ಪುಟ್ಟಪ್ಪ, ಕೆ.ಪಿ.ಪ್ರಕಾಶ್, ನಾಗರತ್ನಮ್ಮ, ಕೆ.ನಾಗರಾಜ್, ಎನ್.ಮೋಹನ, ಕ್ಷೇತ್ರಾಧಿಕಾರಿ ಎಂ.ಜಿ.ಶರಣಪ್ಪ, ಸಿಇಒ ಎಚ್.ಎಂ.ವಿನಯ್, ಶ್ರೀಧರ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net