ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ

26 TTH 03
ತೀರ್ಥಹಳ್ಳಿಯ ಕನ್ನಂಗಿ ಗ್ರಾಪಂ ವಿಸ್ತರಣಾ ಕೊಠಡಿ ನಿರ್ಮಾಣದ ಶಂಕುಸ್ಥಾಪನೆಯನ್ನು ಶಾಸಕ ಆರಗ ಜ್ಞಾನೇಂದ್ರ ನೆರವೇರಿಸಿದರು. ಸುಪ್ರೀತಾ, ಸುಧಾ ಶ್ರೀಧರ್, ವಿಶ್ವನಾಥ್ ಮತ್ತಿತರರಿದ್ದರು.
Published on

ತೀರ್ಥಹಳ್ಳಿ: ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಜನಪ್ರತಿನಿಧಿಗಳು ಸರ್ಕಾರದ ಅನುದಾನ ಅವಲಂಬಿಸದೆ ತಮ್ಮ ವ್ಯಾಪ್ತಿಯಲ್ಲಿರುವ ವ್ಯವಸ್ಥೆ ಬಳಸಿಕೊಂಡು ಜನಸೇವೆ ಮಾಡಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಂಗಿ ಗ್ರಾಮ ಪಂಚಾಯಿತಿ ವಿಸ್ತರಣಾ ಕೊಠಡಿ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗ್ರಾಪಂಗೆ ಬರುವ ಅನುದಾನ ಅಲ್ಪ ಪ್ರಮಾಣದ್ದಾದರೂ ಸದಸ್ಯರ ಮೇಲೆ ಜನರ ಒತ್ತಡ ಹೆಚ್ಚಿರುತ್ತದೆ. ಶಾಸಕರು, ಮಂತ್ರಿ ಮಾಡಬೇಕಾದ ಕೆಲಸವನ್ನೂ ನಿರೀಕ್ಷೆ ಮಾಡುತ್ತಾರೆ. ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳಿಗೆ ಬರುವ ಸವಲತ್ತುಗಳನ್ನು ಅಧಿಕಾರಿಗಳ ನೆರವಿನಿಂದ ಜನರಿಗೆ ಕೊಡಿಸುವ ಮತ್ತು ಜನಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಸುಪ್ರೀತಾ, ಉಪಾಧ್ಯಕ್ಷೆ ಸುಧಾ ಶ್ರೀಧರ್, ವಿಶ್ವನಾಥ್, ಪದ್ಮನಾಭ್, ಸುಧೀರ್, ಉಮೇಶ್, ವನಜಾಕ್ಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net