ತಳಿರು ತೋರಣಗಳಿಂದ ಅಲಂಕಾರ

23-ANP-P2 HARATALU HALAPPA
ಆನಂದಪುರ ಸಮೀಪ ಹೊಳೆಕೊಪ್ಪದ ಮನೆಯಲ್ಲಿ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಕುಟುಂಬ ಸಮೇತರಾಗಿ ಗೋಪೂಜೆ ನೆರವೇರಿಸಿದರು.
Published on

ಆನಂದಪುರ: ಸುತ್ತಮುತ್ತಲ ಪ್ರದೇಶದಲ್ಲಿ ದೀಪಾವಳಿ ಬಲಿಪಾಡ್ಯಮಿ ಹಬ್ಬ ಮತ್ತು ಗೋಪೂಜೆಯು ಸಂಭ್ರಮ ಸಡಗರದಿಂದ ನಡೆಯಿತು.

ಹಬ್ಬದ ಮುನ್ನ ದಿನ ಜಾನುವಾರುಗಳ ಕೊಟ್ಟಿಗೆಯನ್ನು ಸ್ವಚ್ಛವಾಗಿ ತೊಳೆದು ಪ್ರವೇಶ ದ್ವಾರವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಹಬ್ಬದ ದಿನ ಬೆಳಗ್ಗೆ ದನ-ಕರುಗಳ ಮೈತೊಳೆದು, ಮೈಗೆ ಕೆಮ್ಮಣ್ಣು ಮತ್ತು ವಿಭೂತಿಯಿಂದ ಪಟ್ಟೆ ಬಳಿದು, ಕೊರಳಿಗೆ ಚೆಂಡು ಹೂವಿನ ಹಾರ, ಕಡಬು ಮತ್ತು ಸಪ್ಪೆ ರೊಟ್ಟಿ ಕಟ್ಟಲಾಗಿತ್ತು.

ಕೊಂಬಿಗೆ ಬಣ್ಣ, ಕಾಲಿಗೆ ಹೂವಿನ ಗೆಜ್ಜೆ ತೊಡಿಸಿ ಸಾಂಪ್ರದಾಯಿಕವಾಗಿ ಮನೆಮಂದಿ ಪೂಜಿಸಿ ಕುಟುಂಬದ ಒಳಿತಿಗೆ ಪ್ರಾರ್ಥಿಸಿದರು. ಗೋಗ್ರಾಸ ತಿನ್ನಿಸಿ ಕೊಟ್ಟಿಗೆಯಿಂದ ಹೊರಕ್ಕೆ ಬಿಟ್ಟು ಜಾಗಟೆ ಸದ್ದಿನಿಂದ ಬೆದರಿಸಿ ಓಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net