ಗ್ರಾಮಗಳಲ್ಲಿ ನಾಡು-ನುಡಿ ಜಾಗೃತಿ ಮೂಡಿಸಿ

6sor3
ಸೊರಬದ ಬಿದರಗೇರಿ ಗ್ರಾಮದಲ್ಲಿ ಕರವೇ ತಾಲೂಕು ಘಟಕ ಹಮ್ಮಿಕೊಂಡಿದ್ದ ಕನ್ನಡ ನುಡಿ ಹಬ್ಬದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ಮಧು ಬಂಗಾರಪ್ಪ, ವೆಂಕಟೇಶ್ ಹೆಗಡೆ, ಬಲೀಂದ್ರಪ್ಪ, ತಬಲಿ ಬಂಗಾರಪ್ಪ ಇತರರಿದ್ದರು.
Published on

ಸೊರಬ: ಕನ್ನಡ ನಾಡು-ನುಡಿ, ಭಾಷೆ, ಗಡಿ ವಿಷಯದಲ್ಲಿ ರಾಜ್ಯ ಸರ್ಕಾರ ಗಟ್ಟಿಯಾದ ನಿರ್ಧಾರ ಕೈಗೊಳ್ಳಲಿದೆ. ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿರುವುದು ಶ್ಲಾಘನೀಯ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಬಿದರಗೇರಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕನ್ನಡ ನುಡಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ನುಡಿ ಹಬ್ಬ ಆಚರಿಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಂದಿನ ಪೀಳಿಗೆಗೆ ಸಂದೇಶ ರವಾನಿಸಿದಂತಾಗುತ್ತದೆ ಎಂದು ತಿಳಿಸಿದರು.

ಸಮಾಜ ಸೇವಕ ಪರಶುರಾಮ, ಪಿಡಿಒ ಚಿದಾನಂದ ಜಡೆ, ರಿಯಾಜ್ ಅಹಮ್ಮದ್, ನಿಲಯಪಾಲಕಿ ಟಿ.ಶೀಲಾ, ಆಹಾರ ಇಲಾಖೆಯ ಸರ್ವಜ್ಞಮೂರ್ತಿ, ನಿಲಯ ಪಾಲಕ ಎನ್.ನಾಗರಾಜ್, ಉಪನ್ಯಾಸಕ ಎಚ್.ಎನ್.ಬಸವಾರಾಜ್, ಮೆಸ್ಕಾಂ ಪವರ್‌ಮನ್ ಸಿದ್ದೇಶ್, ಆರ್.ಎಂ.ಪವನ್, ತಾಪಂ ಸಹಾಯಕ ನಿರ್ದೇಶಕ ಶ್ರೀರಾಮ್, ಬಿದರಗೇರಿ ಶಿಕ್ಷಕ ಗೋಪಾಲ್, ಲಿಂಗರಾಜ್ ಅವರನ್ನು ಸನ್ಮಾನಿಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಹೆಗಡೆ, ತಾಲೂಕು ಅಧ್ಯಕ್ಷ ಬಲೀಂದ್ರಪ್ಪ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಲೂಕು ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಎಸ್., ಶಿಮುಲ್ ನಿರ್ದೇಶಕ ದಯಾನಂದ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net