ಮಾರಿಕಾಂಬಾ ದೇವಾಲಯ ಸುತ್ತಮುತ್ತ ಸ್ವಚ್ಛತಾ ಕಾರ್ಯ

21Thyagarthi
ತ್ಯಾಗರ್ತಿ ಮಾರಿಕಾಂಬಾ ದೇವಿ ನೂತನ ಕಟ್ಟಡ ಸುತ್ತಮುತ್ತ ಬೀದಿಗಳಲ್ಲಿ ಮುಸ್ಲಿಮರು ಸ್ವಚ್ಛತಾ ಕಾರ್ಯ ನಡೆಸಿದರು.
Published on

ತ್ಯಾಗರ್ತಿ: ಮಾರಿಕಾಂಬಾ ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ ಅಂಗವಾಗಿ ಏರ್ಪಡಿಸಿದ್ದ ಸಿದ್ಧತಾ ಕಾರ್ಯಕ್ರಮದಲ್ಲಿ ಶನಿವಾರ ಮುಸ್ಲಿಮರು ಪಾಲ್ಗೊಂಡಿದ್ದರು.

ದೇವಾಲಯದ ಹೊರ ಆವರಣದಲ್ಲಿ ಕಾಲುವೆ ಹಾಗೂ ಸುತ್ತಮುತ್ತ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಹಮೀದ್ ಖಾನ್ ಮಾತನಾಡಿ, ಮುಸ್ಲಿಂ ಸಮಿತಿಯಿಂದ ಊರಿನ ಮಾರಿಕಾಂಬಾ ಹಾಗೂ ದುರ್ಗಾಂಬಾ ದೇವಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಎಲ್ಲ ರೀತಿ ಸೇವೆ ಹಾಗೂ ಸಹಕಾರ ನೀಡಲಾಗುವುದು. ನಮ್ಮೂರಿನ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಮುಸ್ಲಿಂ ಪ್ರಮುಖರಾದ ವಹಾಬ್, ಕಮಲ್ ಖಾನ್, ಇಮಾಮ್ ಸಾಬ್, ಖಲೀಲ್ ಸಾಬ್ ಶಫಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net