

ಭದ್ರಾವತಿ: ನಗರದ ಮಧು ಲ್ಯಾಬೊರೇಟರಿಯಿಂದ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಲ್ಯಾಬ್ ಮಾಲೀಕ ಎಸ್.ಆರ್.ಜಗದೀಶ್ ಅವರು ರಂಗಪ್ಪ ವೃತ್ತ ಹಾಗೂ ಕೇಶವಪುರ ಬಡಾವಣೆಗಳಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರಾದ ಎಸ್.ಶರವಣ, ಲಕ್ಷ್ಮಮ್ಮ ಹಾಗೂ ತಿರುಮಲ ಎಂಬುವವರನ್ನು ಸನ್ಮಾನಿಸಿದರು.
ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ನಗರದ ಸ್ವಚ್ಛತೆ ಹಾಗೂ ಜನರ ಆರೋಗ್ಯ ಕಾಪಾಡುವ ಕಾರ್ಮಿಕರು ಉತ್ತಮ ಜೀವನ ನಡೆಸುವಂತಾಗಬೇಕು. ಮಕ್ಕಳ ಶಿಕ್ಷಣ ಹಾಗೂ ಆರೊಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಲ್ಯಾಬ್ ಮಾಲೀಕ ಜಗದೀಶ್ ತಿಳಿಸಿದರು.