ಯಶಸ್ಸು ಸಾಧಿಸಲು ವೃತ್ತಿ ಕೌಶಲ ಅವಶ್ಯ

30 RPT News
ರಿಪ್ಪನ್‌ಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಬಿಎ ವಿಭಾಗ ಆಯೋಜಿಸಿದ್ದ ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಟೆಸ್ಟ್ ಸಂಪದ ಕಾರ್ಯಕ್ರಮವನ್ನು ಪ್ರಾಚಾರ್ಯ ವಿರೂಪಾಕ್ಷ ಉದ್ಘಾಟಿಸಿದರು. ಡಾ. ಕೆ.ವಿ.ಗಿರಿಧರ, ಆರ್.ಕೆ.ರಾಜು, ರವೀಶ್ ಇತರರಿದ್ದರು.
Published on

ರಿಪ್ಪನ್‌ಪೇಟೆ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ ಅವಶ್ಯ ಎಂದು ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೆ.ವಿ.ಗಿರಿಧರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಬಿಎ ವಿಭಾಗದಿಂದ ಆಯೋಜಿಸಿದ್ದ ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಟೆಸ್ಟ್ ಸಂಪದ-2025 ಒಂದು ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಭ್ಯಾಸದ ಜತೆಗೆ ಕೌಶಲ ಅಗತ್ಯವಿದೆ. ವಿದ್ಯಾರ್ಹತೆ ಜತೆ ಕೌಶಲಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.

13 ವಿವಿಧ ಕಾಲೇಜುಗಳಿಂದ ಒಟ್ಟು 132 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೋಟೋಗ್ರಫಿ, ಫೈನಾನ್ಸ್, ಮಾರ್ಕೆಟಿಂಗ್, ಕೋಆರ್ಡಿನೇಷನ್, ಕ್ರಿಯೇಟಿವಿಟಿ, ಬಿಸಿನೆಸ್ ಪ್ಲಾೃನ್, ಅಡ್ವರ್ಟೈಸ್‌ಮೆಂಟ್, ಡಾನ್ಸ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಿವಮೊಗ್ಗದ ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ತಂಡ ಸಮಗ್ರ ಪ್ರಶಸ್ತಿ ಪಡೆಯಿತು.

ಪ್ರಾಚಾರ್ಯ ವಿರೂಪಾಕ್ಷ, ಪ್ರಾಧ್ಯಾಪಕ ಆರ್.ಕೆ.ರಾಜು, ಸಹಪ್ರಾಧ್ಯಾಪಕ ರವೀಶ್, ರಜನಿಕಾಂತ್, ಸಿಡಿಸಿ ಮಂಜುನಾಥ ಕಾಮತ್, ಎಸ್‌ಬಿಐ ಬ್ಯಾಂಕ್‌ನ ಮನೋಜ್‌ಕುಮಾರ್, ನವೀನ್‌ಕುಮಾರ್, ನಿವೇದಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net