ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

19 tth 01
ತೀರ್ಥಹಳ್ಳಿಯ ಚಿಟ್ಟೇಬೈಲು ಪ್ರಜ್ಞಾಭಾರತಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಚೆಸ್ ಮತ್ತು ಯೋಗಾಸನ ಸ್ಪರ್ಧೆಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ವೈ.ಗಣೇಶ್, ಹೆದ್ದೂರು ನವೀನ್ ಇತರರಿದ್ದರು.
Published on

ತೀರ್ಥಹಳ್ಳಿ: ಯೋಗ ಮತ್ತು ಚೆಸ್ ಭಾರತವು ವಿಶ್ವಕ್ಕೆ ನೀಡಿರುವ ದೊಡ್ಡ ಕೊಡುಗೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣ ಸಮೀಪದ ಚಿಟ್ಟೇಬೈಲು ಪ್ರಜ್ಞಾಭಾರತಿ ಪ್ರೌಢಶಾಲೆ ಆಶ್ರಯದಲ್ಲಿ ಶಿಕ್ಷಣ ಇಲಾಖೆ, ಚಿನ್ನಭಂಡಾರ ಜಾನಕಮ್ಮ ಸಂಜೀವರಾವ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ- ಬಾಲಕಿಯರ ಚೆಸ್ ಮತ್ತು ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ 170ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣವು ವ್ಯಕ್ತಿತ್ವ ನಿರ್ಮಾಣದೊಂದಿಗೆ ರಾಷ್ಟ್ರಭಕ್ತಿ, ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೂಡಿಸುವ ಮಾಧ್ಯಮವಾಗಬೇಕಿದೆ. ಮಾನಸಿಕ ಮತ್ತು ದೈಹಿಕ ಸಧೃಡತೆ ಮೂಡಿಸುವಲ್ಲಿ ಕ್ರೀಡೆ ಸಹಕಾರಿಯಾಗಿದೆ. ಶೈಕ್ಷಣಿಕವಾಗಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ತಾಲೂಕಿನ ಕ್ರೀಡಾ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಿದ್ದಾರೆ ಎಂದರು.

ಬಿಇಒ ವೈ.ಗಣೇಶ್ ಮಾತನಾಡಿ, ವಿವಿಧ ಕ್ರೀಡೆಗಳಿಂದ ತಾಲೂಕಿನ 6 ತಂಡ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿವೆ ಎಂದು ತಿಳಿಸಿದರು. ಹೊದಲ ಅರಳಾಪುರ ಗ್ರಾಪಂ ಸದಸ್ಯ ವಿನಾಯಕ, ಪ್ರಜ್ಞಾಭಾರತಿ ಶಾಲೆ ಅಧ್ಯಕ್ಷ ಹೆದ್ದೂರು ನವೀನ್, ಉಪಾಧ್ಯಕ್ಷ ರಾಮಚಂದ್ರ ಜೋಯ್ಸ, ಆರ್.ಅಂಜನಪ್ಪ, ಎಂ.ಸಿ.ಮಂಜುನಾಥ್, ಕೆ.ವಿ.ರಮೇಶ್, ಆನಂದಪ್ಪ, ಮುಖ್ಯಶಿಕ್ಷಕಿ ಅಂಬುಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net