ಜೈವಿಕ ಇಂಧನ ಜೀವ ಸಂಕುಲಕ್ಕೆ ಅವಶ್ಯ

4-ANP-P3
ಆನಂದಪುರ ಸಮೀಪದ ಇರುವಕ್ಕಿ ವಿವಿಯಲ್ಲಿ ಏರ್ಪಡಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆಯನ್ನು ಡಾ. ಕೆ.ಸಿ.ಶಶಿಧರ ಉದ್ಘಾಟಿಸಿದರು. ಡಾ. ಬಿ.ಹೇಮ್ಲಾನಾಯ್ಕಾ, ಡಾ. ಹೊನ್ನಪ್ಪ, ಡಾ. ನಾರಾಯಣ ಮಾವರ್ಕರ್ ಇತರರಿದ್ದರು.
Published on

ಆನಂದಪುರ: ಜೈವಿಕ ಇಂಧನ ಜೀವ ಸಂಕುಲಕ್ಕೆ ಅಗತ್ಯ ಎಂದು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ ಹೇಳಿದರು.

ವಿವಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮುಗಿಯದ ಇಂಧನವಾದ ಜೈವಿಕ ಇಂಧನ ವಿಶ್ವಾದ್ಯಂತ ಮುನ್ನೆಲೆಗೆ ಬರುತ್ತಿದೆ. ವಿವಿಧ ಜಾತಿ ಸಸ್ಯಗಳನ್ನು ಬಳಸಿ ಜೈವಿಕ ಇಂಧನ ಉತ್ಪಾದಿಸಲಾಗುತ್ತಿದೆ. ಇದರ ಬಳಕೆ ಹೆಚ್ಚಾದರೆ ಪೆಟ್ರೊಲಿಯಂ ಉತ್ಪನ್ನಗಳು ಬೇಡಿಕೆ ಕಳೆದುಕೊಂಡು ನಮ್ಮ ದೇಶ ಇಂಧನ ಕ್ಷೇತ್ರದಲ್ಲಿ ಸ್ವಾಯತ್ತ ಹೊಂದಲು ಸಾಧ್ಯವಿದೆ ಎಂದರು.

ಜೈವಿಕ ಇಂಧನ ವಿಭಾಗದ ಪ್ರಧಾನ ಸಂಶೋಧಕ ಡಾ. ಹೊನ್ನಪ್ಪ ಮಾತನಾಡಿ, ಜಾಗತಿಕ ತಾಪಮಾನ ಏರಿಕೆಗೆ ಪೆಟ್ರೋಲಿಯಂ ಉತ್ಪನ್ನಗಳೇ ಮುಖ್ಯ ಕಾರಣ. ಇದಕ್ಕೆ ಪರಿಹಾರ ಜೈವಿಕ ಇಂಧನ ಬಳಕೆಯಾಗಿದೆ. ಹಿಪ್ಪೆ, ಹೊಂಗೆ, ಬೇವು ಇತ್ಯಾದಿಗಳು ಜೈವಿಕ ಇಂಧನ ಉತ್ಪಾದಿಸುವ ಮರಗಳಾಗಿವೆ. ಇವುಗಳನ್ನು ಬೆಳೆಸುವ ಕಾರ್ಯ ಅಧಿಕವಾಗಬೇಕು ಎಂದರು.

ವಿವಿ ವಿದ್ಯಾರ್ಥಿಗಳಿಗೆ ಮತ್ತು ಆಯ್ದ ರೈತರಿಗೆ ಜೈವಿಕ ಇಂಧನ ಗಿಡ ಬೆಳೆಸುವ ಮತ್ತು ಬಳಸುವ ಬಗ್ಗೆ ತರಬೇತಿ ನೀಡಲಾಯಿತು. ವಿವಿಯ ಡಾ. ಬಿ.ಹೇಮ್ಲಾನಾಯ್ಕಾ, ಉಪನ್ಯಾಸಕ ಡಾ. ನಾರಾಯಣ ಮಾವರ್ಕರ್, ಡಾ. ಎಂ.ರವಿಕುಮಾರ್, ಡಾ. ರಾಮಕೃಷ್ಣ ಹೆಗಡೆ, ಡಾ. ಬಸವರಾಜಪ್ಪ ಬೋಗಿ, ಡಾ. ಸದಾಶಿವ ನಡುಕೇರಿ, ಡಾ. ಸಿದ್ದಪ್ಪ ಕನ್ನೂರು ಇತರರಿದ್ದರು. 110 ರೈತರು ಮತ್ತು ಬಿಎಸ್‌ಸಿ ಅರಣ್ಯ ವಿಭಾಗದ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net