

ಆಯನೂರು: ತರೀಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ ವೇಯ್ಟ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಪುರುಷರ ತಂಡ ವೇಯ್ಟ ಲಿಫ್ಟಿಂಗ್‌ನ 55 ಕೆ.ಜಿ. ವಿಭಾಗದಲ್ಲಿ ವಿ.ಪವನ್ ಬೆಳ್ಳಿ ಪದಕ, ದೀಪಕ್ ಸಿಂಗ್ ಕಂಚಿನ ಪದಕ, 61 ಕೆ.ಜಿ. ವಿಭಾಗದಲ್ಲಿ ಆರ್.ವಿನಯ್ ಬೆಳ್ಳಿ ಪದಕ, 73 ಕೆ.ಜಿ. ವಿಭಾಗದಲ್ಲಿ ಎಂ.ಪರಶುರಾಮ ಬಂಗಾರದ ಪದಕ, 81 ಕೆ.ಜಿ. ವಿಭಾಗದಲ್ಲಿ ವಿ.ಪ್ರೀತಮ್ ಬೆಳ್ಳಿ ಪದಕ ಪಡೆದಿದ್ದಾರೆ.
ಮಹಿಳೆಯರ ವೇಯ್ಟ ಲಿಫ್ಟಿಂಗ್‌ನ 45 ಕೆ.ಜಿ. ವಿಭಾಗದಲ್ಲಿ ಪಿ.ಜಾನ್ಹವಿ ಬಂಗಾರದ ಪದಕ, 49 ಕೆ.ಜಿ. ವಿಭಾಗದಲ್ಲಿ ಎಂ.ಸಂಜನಾ ಬಂಗಾರದ ಪದಕ, ಪಿ.ಜಾಗೃತಿ ಕಂಚಿನ ಪದಕ, 64 ಕೆ.ಜಿ. ವಿಭಾಗದಲ್ಲಿ ಎಂ.ರಂಜಿತಾ ಬಂಗಾರದ ಪದಕ ಗಳಿಸಿದ್ದಾರೆ. ಪವರ್ ಲಿಫ್ಟಿಂಗ್ ಮಹಿಳೆಯರ 47 ಕೆ.ಜಿ. ವಿಭಾಗದಲ್ಲಿ ಪಿ.ಜಾನ್ಹವಿ ಬೆಳ್ಳಿ ಪದಕ, ಪಿ.ಜಾಗೃತಿ ಕಂಚಿನ ಪದಕ, 52 ಕೆ.ಜಿ. ವಿಭಾಗದಲ್ಲಿ ಎಂ.ಸಂಜನಾ ಬೆಳ್ಳಿ ಪದಕ, 63 ಕೆ.ಜಿ. ವಿಭಾಗದಲ್ಲಿ ಎಂ.ರಂಜಿತಾ ಬಂಗಾರದ ಪದಕ, 69 ಕೆ.ಜಿ. ವಿಭಾಗದಲ್ಲಿ ಎಸ್.ಅಶ್ವಿನಿ ಕಂಚಿನ ಪದಕ ಗಳಿಸಿರುತ್ತಾರೆ. ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆಯ 74 ಕೆ.ಜಿ. ವಿಭಾಗದಲ್ಲಿ ಎಂ.ಪರಶುರಾಮ ಬೆಳ್ಳಿ ಪದಕ ಗಳಿಸಿದ್ದಾರೆ.
ಆಯನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಹಿಳೆಯರ ವೇಯ್ಟ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್‌ನಲ್ಲಿ ಪ್ರಥಮ ತಂಡ ಪ್ರಶಸ್ತಿ ಹಾಗೂ ಪುರುಷರ ವಿಭಾಗದ ವೇಯ್ಟ ಲಿಫ್ಟಿಂಗ್‌ನಲ್ಲಿ ತೃತೀಯ ತಂಡ ಪ್ರಶಸ್ತಿ ಗಳಿಸಿದ್ದಾರೆ.