ಗ್ರಾಮೀಣ ಭಾಗಕ್ಕೆ ಆಟೋ ಸೇವೆ ಅವಶ್ಯ

29 tth 02
ತೀರ್ಥಹಳ್ಳಿಯ ದೇವಂಗಿಯಲ್ಲಿ ನಿರ್ಮಿಸಿರುವ ಆಟೋರಿಕ್ಷಾ ನಿಲ್ದಾಣವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ನವೀನ್, ರಾಘವೇಂದ್ರ, ಅನ್ನಪೂರ್ಣಾ ಇದ್ದರು.
Published on

ತೀರ್ಥಹಳ್ಳಿ: ಕರೊನಾ ಸಂಕಷ್ಟದ ನಂತರದಲ್ಲಿ ಗ್ರಾಮೀಣ ಭಾಗದ ಸಾಮಾನ್ಯ ಜನರು ಬಸ್ ಸೌಲಭ್ಯದಿಂದ ವಂಚಿತರಾಗಿದ್ದು, ಬಡವರಿಗೆ ಆಟೋರಿಕ್ಷಾ ಅವಲಂಬನೆ ಅನಿವಾರ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ 4 ಲಕ್ಷ ರೂ. ಅನುದಾನದಲ್ಲಿ ದೇವಂಗಿಯಲ್ಲಿ ನಿರ್ಮಿಸಿರುವ ಆಟೋರಿಕ್ಷಾ ನಿಲ್ದಾಣ ಉದ್ಘಾಟಿಸಿ ಮಾತನಾಡಿ, ಕರೊನಾ ಸಂಕಷ್ಟದ ನಂತರ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿದ್ದ ಬಹುತೇಕ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸ್ವಂತ ವಾಹನ ಹೊಂದಿರದ ಬಡ ಜನರು ವಾಹನ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಹೀಗಾಗಿ ಆಟೋರಿಕ್ಷಾ ಅನಿವಾರ್ಯ. ಚಾಲಕರು ಪ್ರಯಾಣಿಕರ ಶೋಷಣೆ ಮಾಡಬಾರದು ಎಂದು ತಿಳಿಸಿದರು.

ದೇವಂಗಿ ಗ್ರಾಪಂ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷೆ ಅನ್ನಪೂರ್ಣಾ, ಬಿಜೆಪಿ ಮಂಡಲ ಅಧ್ಯಕ್ಷ ಹೆದ್ದೂರು ನವೀನ್, ಮುಖಂಡ ಸೊಪ್ಪುಗುಡ್ಡೆ ರಾಘವೇಂದ್ರ, ಡಿ.ಎಂ.ಮನುದೇವ್, ಮಹೇಶ್, ಆಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net