

ಸೊರಬ: ಶಾಸ್ತ್ರೀಯ ಭಾಷಾ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿ, ಪರಂಪರೆ ರಕ್ಷಣೆಯಲ್ಲಿ ಪ್ರತಿಯೊಬ್ಬರು ಕಟಿಬದ್ಧರಾಗಿರಬೇಕು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ಪಟ್ಟಣದ ಸೊಪ್ಪಿನ ಕೇರಿ ಬಡಾವಣೆಯಲ್ಲಿ ಶ್ರೀ ದುರ್ಗಾಂಬ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ಶಾಶ್ವತ ಕನ್ನಡ ಧ್ವಜಸ್ತಂಭ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲಘಟ್ಟಕ್ಕೆ ತಕ್ಕಂತೆ ಲಿಪಿಗಳು ಬೆಳವಣಿಗೆ ಹೊಂದುವ ಮೂಲಕ ಸ್ಪಷ್ಟವಾದ ಭಾಷಾಲಿಪಿಯಾಗಿ ಕನ್ನಡ ರೂಪುಗೊಂಡಿದೆ ಎಂದು ತಿಳಿಸಿದರು.
ಕನ್ನಡ ಕಟ್ಟುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ವ್ಯವಹಾರಿಕವಾಗಿ ಕನ್ನಡ ಬಳಕೆ ಮಾಡಬೇಕು. ಕನ್ನಡದ ಮನಸ್ಸುಗಳು ಒಗ್ಗೂಡಿ ಶಾಶ್ವತ ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ವಿಷಯ. ಪ್ರತಿವರ್ಷ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತಾಗಬೇಕು. ಅಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುತ್ತೇನೆ ಎಂದರು.
ಕನ್ನಡ ಧ್ವಜಸ್ತಂಭದ ಉದ್ಘಾಟನೆ ಮತ್ತು ನಾಡ ಧ್ವಜಾರೋಹಣವನ್ನು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ನೆರವೇರಿಸಿದರು. ಕಿರಣ್, ನಾಗರಾಜ, ಪ್ರೇಮ ಕುಮಾರ್ ಹಾಗೂ ಕೆ.ಟಿ.ಮಂಜುನಾಥ ತುರುವೆಕೆರೆ ಅವರನ್ನು ಸನ್ಮಾನಿಸಲಾಯಿತು.
ಪುರಸಭೆ ಸದಸ್ಯ ಡಿ.ಎಸ್.ಪ್ರಸನ್ನಕುಮಾರ್ ದೊಡ್ಮನೆ, ಮಾಜಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಕಸಾಪ ತಾಲೂಕು ಅಧ್ಯಕ್ಷ ಎನ್. ಷಣ್ಮುಖಾಚಾರ್, ಶ್ರೀ ದುರ್ಗಾಂಬ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಆರ್.ಕೃಷ್ಣಮೂರ್ತಿ, ಅಧ್ಯಕ್ಷ ಡಿ.ಮಹಾಬಲಪ್ಪ, ಪ್ರಮುಖರಾದ ನಾಗರಾಜ ಗುತ್ತಿ, ಕೆ.ಪಾಂಡುರಂಗ, ಶ್ರೀಕಾಂತ್ ಶೇಟ್, ಡಿ.ಪರಸಪ್ಪ, ಕುಮಾರ್ ಮಂಚಿ, ರಮೇಶ್, ಸಂತೋಷ್ ಸೊಪ್ಪಿನಕೇರಿ, ಕೆ.ರಾಜು, ಪಿ.ಸುರೇಶ್, ಜಿ.ಗಣೇಶ್, ಕೆ.ಮಹಾಬಲೇಶ್ ಇತರರಿದ್ದರು.