ಮುಂದಿನ ಪೀಳಿಗೆ ಮೇಲೆ ದುಷ್ಪರಿಣಾಮ

5 RPT 1
ರಿಪ್ಪನ್‌ಪೇಟೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾಷಣ ಸ್ಪರ್ಧೆ ವಿಜೇತರಿಗೆ ಸಸಿ ವಿತರಿಸಲಾಯಿತು. ಕೃಷ್ಣಮೂರ್ತಿ, ಕೆ.ಟಿ.ಈಶ್ವರ್, ಜನಾರ್ದನ ನಾಯ್ಕ ಇತರರಿದ್ದರು.
Published on

ರಿಪ್ಪನ್‌ಪೇಟೆ: ಪ್ರಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂದು ಜೀವಶಾಸ್ತ್ರ ಉಪನ್ಯಾಸಕ ಕೆ.ಟಿ.ಈಶ್ವರ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಗಿಡಮರಗಳು ಆಮ್ಲಜನಕ ಹೊರಸೂಸಿ ನಮಗೆ ಜೀವತ್ವವನ್ನು ನೀಡಿದರೆ, ನೀರು ನಮ್ಮ ದೇಹದ ಜಲಧಾತುವಾಗಿದೆ. ಮಣ್ಣು ಆಹಾರ ಬೆಳೆಯುತ್ತ ದೇಹದ ಅಂತಃಸತ್ವವನ್ನು ಹೆಚ್ಚಿಸಿದೆ. ನಮ್ಮ ಸಂಪೂರ್ಣ ಜೀವನವೇ ಪ್ರಕೃತಿಯ ಆಸರೆಯಲ್ಲಿದೆ ಎಂದು ತಿಳಿಸಿದರು.

ಅರಣ್ಯ ನಾಶ, ಅಶುಚಿತ್ವ, ಅಪರಿಮಿತ ರಾಸಾಯನಿಕಗಳ ಬಳಕೆಯಂತಹ ವಿಕೃತಿಯನ್ನು ಮುಂದುವರಿಸಲಾಗಿದೆ. ಸೃಷ್ಟಿಯ ಔದಾರ್ಯವನ್ನು ದುರ್ಬಳಕೆ ಮಾಡಿಕೊಳ್ಳದೆ ಪರಿಸರದ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು ಎಂದರು. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಭಾಷಣ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ಮತ್ತು ಗಿಡಗಳನ್ನು ವಿತರಿಸಲಾಯಿತು. ಪ್ರಾಚಾರ್ಯ ಕೃಷ್ಣಮೂರ್ತಿ, ಉಪನ್ಯಾಸಕರಾದ ಗೋಪಿಕಾ, ಜನಾರ್ದನ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net