

ಸೊರಬ: ಸಹಕಾರ ಬ್ಯಾಂಕ್ಗಳಲ್ಲಿ ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡಬೇಕು ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ನಾಗರಾಜಗೌಡ ಚಿಕ್ಕಾವಲಿ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಬ್ಯಾಂಕ್ನಲ್ಲಿ 5,890 ಸದಸ್ಯರಿದ್ದು, ವರದಿ ಸಾಲಿನಲ್ಲಿ 114 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ ಎಂದರು.
ಸದಸ್ಯರಿಗೆ ನೀಡಿದ ಸಾಲದಲ್ಲಿ ಶೇ.76ರಷ್ಟು ವಸೂಲಾತಿಯಾಗಿದೆ. ಬ್ಯಾಂಕ್ ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಸಚಿವ ಮಧು ಬಂಗಾರಪ್ಪ ಗಮನಕ್ಕೆ ತಂದು ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ಗೆ 41.65 ಲಕ್ಷ ರೂ. ಲಾಭದ ನಿರೀಕ್ಷೆ ಹೊಂದಲಾಗಿದೆ. ಸದಸ್ಯರು ಬ್ಯಾಂಕಿನ ಕನಿಷ್ಠ ಸೇವೆ ಬಳಸಿಕೊಳ್ಳಬೇಕು. ಬ್ಯಾಂಕ್ ರೈತರಿಗೆ ಅಗತ್ಯವಿರುವ ಸಾಲ ಸೌಲಭ್ಯ ಕಲ್ಪಿಸುತ್ತಿದೆ. 6.92 ಕೋಟಿ ರೂ. ಸಾಲ ಹಂಚುವ ಗುರಿ ಹೊಂದಲಾಗಿದೆ. ಬ್ಯಾಂಕ್ ಅಭಿವೃದ್ಧಿಗೆ ಷೇರುದಾರರ ಸಹಕಾರ ಅಗತ್ಯ ಎಂದರು.
ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಲಾಯಿತು. ಬ್ಯಾಂಕ್ ವ್ಯವಸ್ಥಾಪಕ ಸತೀಶ್ ಭಂಡಾರಿ ವರದಿ ವಾಚಿಸಿದರು. ಬ್ಯಾಂಕ್ ಉಪಾಧ್ಯಕ್ಷ ಒ.ಬಿ.ಯುವರಾಜ, ಎಚ್.ದಾನಪ್ಪ, ಪರಸಪ್ಪ, ಸಿ.ವಿಜೇಂದ್ರಕುಮಾರ್, ವೀರೇಂದ್ರಕುಮಾರ್, ಶಾರದಾ, ಸೀತಮ್ಮ, ಗುಡ್ಡಪ್ಪ, ಜಿ.ರಾಜಶೇಖರ್, ಜೆ.ಮಿಥುನ್, ಬಿ.ಸಿ.ಪ್ರದೀಪ ಕುಮಾರ್, ರತ್ನಮ್ಮ, ಸಿಬ್ಬಂದಿ ಮಂಜುನಾಥ ಸ್ವಾಮಿ, ಡಿ.ಟಿ.ಸುಬ್ರಹ್ಮಣ್ಯ, ಗಣಪತಿ ಇದ್ದರು.