

ಶಿಕಾರಿಪುರ: ಬಸವ ಜಯಂತಿ ಪ್ರಯುಕ್ತ ಗುರುವಾರ ಶ್ರೀ ಮುರುಘರಾಜೇಂದ್ರ ವಿರಕ್ತ ಮಠದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಯುವ ಬಳಗ, ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘ, ಶ್ರೀ ಮುರುಘರಾಜೇಂದ್ರ ವಿರಕ್ತಮಠ ಟ್ರಸ್ಟ್ ಮತ್ತು ಶಿವಮೊಗ್ಗದ ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಸಹಯೋಗದಲ್ಲಿ 15ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ 64 ಜನರು ರಕ್ತದಾನ ಮಾಡಿದರು. ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬಳಗದ ಗೌರವಾಧ್ಯಕ್ಷ ಬಿ.ಜೆ.ಮಹೇಶ್ಕುಮಾರ್, ಬಳಗದ ಅಧ್ಯಕ್ಷ ಡಿ.ವಿವೇಕ್, ಉಪಾಧ್ಯಕ್ಷ ನವೀನ್ ಶಾಸ್ತ್ರಿ, ಕಾರ್ಯದರ್ಶಿ ಸಂಜಿತ್, ಸದಸ್ಯರಾದ ಪ್ರವೀಣ್ಕುಮಾರ್, ರಾಘವೇಂದ್ರ, ರಾಜೇಂದ್ರಪ್ರಸಾದ್, ಸಿದ್ದಲಿಂಗೇಶ್, ಜಿ.ಪ್ರವೀಣ್, ಪ್ರಸಾದ್, ವಿನಾಯಕ, ಮೃತ್ಯುಂಜಯ, ಗುರುಪ್ರಸಾದ್, ವಾಗೀಶ್ ಸ್ವಾಮಿ, ಬಿ.ಪಿ.ಈರಣ್ಣ, ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಪ್ರತಿನಿಧಿ ಧರಣೇಂದ್ರ ದಿನಕರ್ ಇತರರಿದ್ದರು.