

ಆಂಧ್ರಪ್ರದೇಶ: ರೆಬೆಲ್ ಸ್ಟಾರ್, ನಟ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಸೈನ್ಸ್-ಫಿಕ್ಷನ್ ಸಿನಿಮಾ ಸದ್ಯ ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಮಧ್ಯೆ ಮತ್ತೊಬ್ಬ ಸ್ಟಾರ್ ನಟನ ಚಿತ್ರವು ಸೈ-ಫೈ ಆಗಿದ್ದು, ಸದ್ದಿಲ್ಲದೇ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಇದೀಗ ರಿಲೀಸ್ನತ್ತ ಮುಖಮಾಡಿದೆ. ಅಷ್ಟಕ್ಕೂ ಯಾರು ಆ ನಟ? ಯಾವ ಚಿತ್ರವಿದು? ಎಂಬುದರ ಮಾಹಿತಿ ಹೀಗಿದೆ ನೋಡಿ.
ತೆಲುಗು ಚಿತ್ರನಟ ಶಿವ ಕಾರ್ತಿಕೇಯನ್ ಅಭಿನಯದ ಹಾಗೂ ಆರ್. ರವಿಕುಮಾರ್ ನಿರ್ದೇಶನದ ಸೈ-ಫೈ, ಥ್ರಿಲ್ಲರ್ ಜಾನರ್ ಒಳಗೊಂಡ 'ಅಯಾಲನ್' ಇದೀಗ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರತಂಡ ಈ ಹಿಂದೆಯೇ ನಿಗದಿಪಡಿಸಿದಂತೆ ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ಸಿನಿಮಾ ತೆರೆ ಕಾಣಬೇಕಿತ್ತು. ಆದ್ರೆ, ಬಾಕಿ ಉಳಿದಿದ್ದ ಗ್ರಾಫಿಕ್ಸ್ (CGI) ಕೆಲಸಗಳಿಂದಾಗಿ ಚಿತ್ರವನ್ನು ಪದೇ ಪದೇ ಮುಂದೂಡಲಾಯಿತು. ಇದೀಗ 2024ಕ್ಕೆ ಅಧಿಕೃತವಾಗಿ ರಿಲೀಸ್ ಆಗಲಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.
ಈ ಚಿತ್ರವು ಮಹೇಶ್ ಬಾಬು ನಟನೆಯ 'ಗುಂಟೂರು ಕಾರಂ' ಚಿತ್ರದ ಜತೆ ಬಾಕ್ಸ್ ಆಫೀಸ್ನಲ್ಲಿ ಎದುರು ನೋಡಲಿದೆ ಎಂದು ಹೇಳಲಾಗಿದ್ದು,
ಸಿನಿಮಾದ ಅಧಿಕೃತ ರನ್ ಟೈಮ್ ಇದೀಗ ಹೊರಬಿದ್ದಿದೆ. ಮಾಹಿತಿಯ ಪ್ರಕಾರ, ಸಿನಿಮಾ 155 ನಿಮಿಷಗಳ (2 ಗಂಟೆ 35 ನಿಮಿಷ) ರನ್ಟೈಮ್ ಅನ್ನು ಹೊಂದಿದೆ.
ಈ ಚಿತ್ರದಲ್ಲಿ ಶಿವ ಕಾರ್ತಿಕೆಯನ್ಗೆ ನಾಯಕಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡರೆ, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಭಾನು ಪ್ರಿಯಾ, ಯೋಗಿ ಬಾಬು ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತವಿದ್ದು, ಕೆಜೆಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೋಟಪಾಡಿ ಜೆ. ರಾಜೇಶ್ ನಿರ್ಮಿಸಿದ್ದಾರೆ,(ಏಜೆನ್ಸೀಸ್).