ಬೃಹನ್​ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​ ಉಪಚುನಾವಣೆಯಲ್ಲಿ ಶಿವಸೇನೆಗೆ ಗೆಲುವು

BMC 10 JAN 20
Published on

ಮುಂಬೈ: ಬೈಹನ್​ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​(ಬಿಎಂಸಿ)ನ 141ನೇ ವಾರ್ಡ್​ ಮನ್​ಕುಡ್​ನ ಉಪಚುನಾವಣೆಯಲ್ಲಿ ಶಿವಸೇನೆ ಗೆಲುವಿನ ನಗೆ ಬೀರಿದೆ.
ಈ ವಾರ್ಡ್​ನ ಉಪಚುನಾವಣೆ ಗುರವಾರ ನಡೆದಿದ್ದು, ಶುಕ್ರವಾರ ಮತ ಎಣಿಕೆ ಆಗಿದೆ. ಶಿವಸೇನೆಯ ಅಭ್ಯರ್ಥಿ ವಿಠಲ ಲೋಕರೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಬ್ಲು ಪಾಂಚಾಲ್ ಅವರನ್ನು 1,385 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಲೋಕರೆಗೆ 4,427 ಮತಗಳು ಬಿದ್ದರೆ, ಬಬ್ಲೂಗೆ 3,042 ಮತಗಳು ಸಿಕ್ಕಿವೆ. ಕಣದಲ್ಲಿ ಒಟ್ಟು 18 ಅಭ್ಯರ್ಥಿಗಳು ಇದ್ದರು. ಈ ವಾರ್ಡ್​ಗೆ ಉಪಚುನಾವಣೆ ನಡೆಯಲು ಕಾರಣವಾಗಿದ್ದು ಲೋಕರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಲೋಕರೆ ಅಲ್ಲಿ ರಾಜೀನಾಮೆ ಕೊಟ್ಟು 2019ರ ಆಗಸ್ಟ್​ನಲ್ಲಿ ಶಿವಸೇನೆ ಸೇರಿದ್ದರು. ಬಳಿಕ ಶಿವಸೇನೆಯ ಟಿಕೆಟ್​ ಪಡೆದು ಅಕ್ಟೋಬರ್​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮನ್​ಕುದ್​ ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, 25,000 ಮತಗಳ ಅಂತರದ ಸೋಲು ಕಂಡರು.

ಭಾರತದ ಅತ್ಯಂತ ಶ್ರೀಮಂತ ಸ್ಥಳೀಯಾಡಳಿತ ಸಂಸ್ಥೆ ಇದಾಗಿದ್ದು, 227 ಸದಸ್ಯರಿದ್ದಾರೆ. ಇಲ್ಲಿ ಶಿವಸೇನೆಯ ಆಡಳಿತ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net