ಹೊರ್ಮುಜ್ ಜಲಸಂಧಿ ಬಳಿ ಜಿಎಫ್ಎಸ್ ಪ್ರೈಡ್ ಹಡಗು ಮುಳುಗಿದೆ
ಸಮುದ್ರದಲ್ಲಿ ತೇಲುತ್ತಿರುವ ಐಫೋನ್ ಬಾship sinkingಕ್ಸ್, ಪರ್ಫ್ಯೂಮ್ ಬಾಟಲಿಗಳು
ಹೊರ್ಮುಜ್ ಜಲಸಂಧಿ ಬಳಿ ವಾಣಿಜ್ಯ ಹಡಗುಗಳ ಸುರಕ್ಷತೆ ಬಗ್ಗೆ ಆತಂಕ
Strait of Hormuz Ship Inciden: ಸಮುದ್ರದಲ್ಲಿ ತೇಲುತ್ತಿರುವ ಐಫೋನ್ ಬಾಕ್ಸ್ಗಳು, ದುಬಾರಿ ಪರ್ಫ್ಯೂಮ್ ಬಾಟಲಿಗಳು… ಅವುಗಳನ್ನು ಸಣ್ಣ ದೋಣಿಗಳಲ್ಲಿ ಬಂದವರು ಸಂಗ್ರಹಿಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇರಾನ್ ಸಮುದ್ರದ ಮೈನ್ಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಹೇಳಿರುವ ಸರಕು ಹಡಗಿನ ಘಟನೆಯ ಬಳಿಕ ಈ ವಿಡಿಯೋಗಳು ಹರಿದಾಡುತ್ತಿವೆ.
ದುಬೈನಿಂದ ಸರಕು ಸಾಗಿಸುತ್ತಿದ್ದ ಸಿಂಗಾಪುರ ಧ್ವಜದ ಜಿಎಫ್ಎಸ್ ಪ್ರೈಡ್ (GFS Pride) ಹಡಗು ಬುಧವಾರ ಕ್ಷಿಪಣಿಯಂತಹ ಉತ್ಕ್ಷೇಪಕದಿಂದ ಹಾನಿಗೊಳಗಾಗಿ ಬೆಂಕಿ ಹೊತ್ತಿಕೊಂಡ ಬಳಿಕ ಮುಳುಗಿದೆ ಎಂದು ಕಡಲ ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿದ್ದ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ.
ವರದಿಗಳ ಪ್ರಕಾರ, ಹಡಗು ಸುಮಾರು 2,500 ಕಂಟೈನರ್ಗಳನ್ನು ಸಾಗಿಸುತ್ತಿತ್ತು. ಇವುಗಳಲ್ಲಿ ಐಫೋನ್ಗಳು ಮತ್ತು ದುಬಾರಿ ಸುಗಂಧ ದ್ರವ್ಯಗಳಿದ್ದವು ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಹೀಗಾಗಿ, ವಿಡಿಯೋದಲ್ಲಿರುವ ವಸ್ತುಗಳು ಇದೇ ಹಡಗಿನಿಂದ ಬಂದಿವೆಯೇ ಎಂಬುದು ಖಚಿತವಾಗಿಲ್ಲ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಹಡಗು ನೌಕಾ ಮೈನ್ಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಹೇಳಿದೆ. ಆದರೆ, ಕಡಲ ಅಧಿಕಾರಿಗಳ ಪ್ರಕಾರ, ಹಡಗಿಗೆ ಗುರುತು ಪತ್ತೆಯಾಗದ ಉತ್ಕ್ಷೇಪಕದಿಂದ ದಾಳಿ ನಡೆದಿತ್ತು. ಹೀಗಾಗಿ, ಹಡಗು ಮುಳುಗಿದ ನಿಖರ ಕಾರಣದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಹೊರ್ಮುಜ್ ಜಲಸಂಧಿ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಗೆ ಈ ಜಲಮಾರ್ಗ ಅತ್ಯಂತ ಪ್ರಮುಖವಾಗಿದೆ.