ಸೇತುವೆಗೆ ಹಡಗು ಡಿಕ್ಕಿ; ಮಧ್ಯದಲ್ಲಿ ಸೇತುವೆ ಕುಸಿದು ಇಬ್ಬರು ಸಾವು

shiprams
Published on

ಚೀನಾ: ನದಿಯ ಸೇತುವೆಗೆ ಸರಕು ಸಾಗಣೆ ಹಡಗು ಢಿಕ್ಕಿ ಹೊಡೆದ ಪರಿಣಾಮ ಹಲವು ವಾಹನಗಳು ನದಿಗೆ ಬಿದ್ದಿವೆ. ಈ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ.

ದಕ್ಷಿಣ ಚೀನಾದ ಗುವಾಂಗ್‌ಝೌ ನಗರದ ನನ್ಶಾ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಪಘಾತದಿಂದ ಸೇತುವೆಯ ಮಧ್ಯ ಭಾಗ ಸಂಪೂರ್ಣ ಕುಸಿದಿದೆ. ಇದರಿಂದ ಹಲವು ವಾಹನಗಳು ಪರ್ಲ್ ನದಿಗೆ ಬಿದ್ದಿವೆ.

ಫೋಶಾನ್‌ನಿಂದ ಬಂದು ಗುವಾಂಗ್‌ಝೌ ಕಡೆಗೆ ಪ್ರಯಾಣಿಸುತ್ತಿದ್ದಾಗ, ಸರಕು ಹಡಗು ಗುವಾಂಗ್‌ಝೌನಲ್ಲಿರುವ ಲಿಕ್ಸಿನ್ ಸಮುದ್ರ ಸೇತುವೆಗೆ ಡಿಕ್ಕಿ ಹೊಡೆದಿದೆ. ಸೇತುವೆ ಮಧ್ಯದಲ್ಲಿ ಕುಸಿದಿದ್ದರಿಂದ ಬಸ್ ಸೇರಿದಂತೆ ಐದು ವಾಹನಗಳು ನದಿಗೆ ಬಿದ್ದಿವೆ. ಅಪಘಾತಕ್ಕೆ ಕಾರಣವಾದ ಹಡಗಿನಲ್ಲಿ ಯಾವುದೇ ಸರಕು ಇರಲಿಲ್ಲ ಮತ್ತು ಸೇತುವೆಯ ಕೆಳಗೆ ಸಿಲುಕಿಕೊಂಡಿತ್ತು. ಅಪಘಾತದ ದೃಶ್ಯಗಳನ್ನು  ಚೀನಾ ಸೆಂಟ್ರಲ್ ಟೆಲಿವಿಷನ್ (CCTV) ನಲ್ಲಿ ದಾಖಲಿಸಲಾಗಿದೆ.

ಅಪಘಾತಕ್ಕೆ ಕಾರಣವಾದ ಹಡಗಿನ ಕ್ಯಾಪ್ಟನ್‌ನನ್ನು ಗುವಾಂಗ್‌ಝೌ ಪೊಲೀಸರು ಬಂಧಿಸಿದ್ದಾರೆ. ಲಿಕ್ಸಿನ್ ಸಮುದ್ರ ಸೇತುವೆಯ ಸುತ್ತಮುತ್ತ ವಾಸಿಸುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು  ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net