ಶಿಂಧೆ ಡಿಸಿಎಂ ಸ್ಥಾನವನ್ನು ಎಂದಿಗೂ ಒಪ್ಪಲ್ಲ.. ಶಿವಸೇನೆ ನಾಯಕರು ಒಕ್ಕೊರಲ ಹೇಳಿಕೆ.. ಮುಂದುವರೆದ ಮಹಾ CM ಜಟಾಪಟಿ

CM (3)
Published on

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಂಡ ಕೆಲ ದಿನಗಳಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮಂಗಳವಾರ(ನ. 26) ಮುಖ್ಯಮಂತ್ರಿ(CM) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಮಹಾರಾಷ್ಟ್ರದ(ಸಿಎಂ) ಚುಕ್ಕಾಣಿ ಹಿಡಿಯುವವರು ಯಾರು ಎಂಬ ಪ್ರಶ್ನೆ ಮೂಡಿದ್ದು, ಸಿಎಂ ಸ್ಥಾನದ ಜಟಾಪಟಿ ಮುಂದುವರೆದಿದೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಏಕನಾಥ್ ಶಿಂಧೆಗೆ ಇದೀಗ, ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿ ಹೇಳಿದೆ ಎನ್ನಲಾಗಿದೆ. ಆದರೆ, ಡಿಸಿಎಂ ಸ್ಥಾನವನ್ನು ನಮ್ಮ ನಾಯಕನ ಏಕನಾಥ್​ ಶಿಂಧೆ ಒಪ್ಪುವುದಿಲ್ಲ ಎಂದು ಶಿವಸೇನಾ ನಾಯಕ ಸಂಜಯ್​ ಶೀರ್ಸಾತ್​ ಹೇಳಿದ್ದಾರೆ.

ನಮ್ಮ ನಾಯಕರ ಹೆಸರಲ್ಲಿ ಚುನಾವಣೆ ಎದುರಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮರಳು ಅರ್ಹರು, ಅವರು ಡಿಸಿಎಂ ಸ್ಥಾನವನ್ನು ಎಂದಿಗೂ ಒಪ್ಪಲ್ಲ. ಶಿಂಧೆಯೇ ಸಿಎಂ ಆಗಿ ಮುಂದುವರೆದರೆ ಮುಂದಿನ ಚುನಾವಣೆಗಳನ್ನು ಸುಲಭವಾಗಿ ಎದುರಿಸಬಹುದು ಇದು ನನ್ನ ಮಾತು ಮಾತ್ರವಲ್ಲ ಶಿವಸೇನೆ ನಾಯಕರು ಒಕ್ಕೊರಲ ಹೇಳಿಕೆ ಎಂದಿದ್ದಾರೆ.

ಬಿಜೆಪಿಗೆ ಸಿಎಂ ಸ್ಥಾನ ನೀಡಲು ಮಹಾಮೈತ್ರಿಕೂಟದಲ್ಲಿ ಒಪ್ಪಂದಕ್ಕೆ ಬಂದಿದ್ದು ದೇವೇಂದ್ರ ಫಡ್ನವಿಸ್ ಬಿಜೆಪಿಯಿಂದ ಈ ಜವಾಬ್ದಾರಿಯನ್ನು ಪಡೆಯಬಹುದು ಎನ್ನಲಾಗಿದೆ. ಅಲ್ಲದೆ ಶಿವಸೇನೆ ಮತ್ತು ಎನ್‌ಸಿಪಿ ಬಣಗಳಿಂದ ತಲಾ ಒಬ್ಬ ಉಪಮುಖ್ಯಮಂತ್ರಿ ಇರಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದ ನಂತರ ಸಿಎಂ ಸ್ಥಾನಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ನಡುವೆ ಹಣಾಹಣಿ ನಡೆಯುತ್ತಿದೆ. ಶಿವಸೇನೆಯು ಏಕನಾಥ್ ಶಿಂಧೆಯನ್ನು ಸಿಎಂ ಮಾಡಬೇಕೆಂದು ಒತ್ತಾಯಿಸುತ್ತಿದೆ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ನಿತೀಶ್ ಕುಮಾರ್ ಅವರನ್ನು ಸಿಎಂ ಮಾಡಿದ ಬಿಹಾರ ಸೂತ್ರವನ್ನು ಮಹಾರಾಷ್ಟ್ರದಲ್ಲಿ ಜಾರಿಗೆ ತರಲು ಶಿವಸೇನೆ ಒತ್ತಾಯಿಸುತ್ತಿದೆ.

ಏಕನಾಥ್ ಶಿಂಧೆ ಸಿಎಂ ಆಗದಿದ್ದರೆ, ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅವರ ಸ್ಥಾನದಲ್ಲಿ ಪಕ್ಷದ ಯಾವುದೇ ನಾಯಕರನ್ನು ಉಪಮುಖ್ಯಮಂತ್ರಿ ಮಾಡಬಹುದು. ಮಹಾರಾಷ್ಟ್ರದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಮಹಾರಾಷ್ಟ್ರದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬುವುದನ್ನು ಕಾದು ನೊಡಬೇಕಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದ 288 ಸ್ಥಾನಗಳ ಪೈಕಿ 234 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಪೈಕಿ ಬಿಜೆಪಿ ಗರಿಷ್ಠ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದಿದೆ. (ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net