ಶಿವಮೊಗ್ಗ ಗಲಾಟೆ: ರಾಜಕೀಯ ಲಾಭಕ್ಕೆ ಬಿಜೆಪಿಯಿಂದ ಸತ್ಯ ಶೋಧನಾ ಸಮಿತಿ; ದಿನೇಶ್ ಗುಂಡೂರಾವ್

dinesh gundu rao
Published on

ಬೆಂಗಳೂರು: ರಾಜಕೀಯ ಲಾಭ ಪಡೆದುಕೊಳ್ಳೋದೆ ಉದ್ದೇಶದಿಂದ ಶಿವಮೊಗ್ಗಕ್ಕೆ ಬಿಜೆಪಿ ಸತ್ಯ ಶೋಧನ ಸಮಿತಿ ಭೇಟಿ ನೀಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ರಾಜ್ಯದಲ್ಲಿ ಗಲಾಟೆಗಳು ಆಗಬೇಕು, ಹಿಂಸಾತ್ಮಕ ಘಟನೆಗಳು ನಡೆಯಬೇಕು. ಆಗ ಅದರ ಲಾಭ ಪಡೆಯಲು ನೋಡುತ್ತಾರೆ ಎಂದರು.

ಶಿವಮೊಗ್ಗ ಗಲಾಟೆಗೆ ಸಂಬಂಧಿಸಿದಂತೆ ಈಗಾಗಲೇ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದೆ. ಬಿಜೆಪಿಯವರಿಗೆ ಶಾಂತಿ ನೆಲೆಸುವುದು ಬೇಕಿಲ್ಲ. ಇಂತಹ ಘಟನೆಗಳಿಗಾಗೇ ಕಾಯುತ್ತಿರುತ್ತಾರೆ. ಬೆಂಕಿ ಹಚ್ಚಲು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಶಾಮನೂರು ಶಿವಶಂಕರಪ್ಪ ಹಿರಿಯ ನಾಯಕರು. ಅವರು ಹೇಳಿದ ರೀತಿಯಲ್ಲಿ ಆಗಿಲ್ಲ. ಅವರಿಗೆ ಮಾಹಿತಿ ಕೊರತೆ ಇರಬಹುದು. ನಮ್ಮ ಸರ್ಕಾರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ.

ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಒಟ್ಟಿಗೆ ಹೋಗುತ್ತಿದ್ದೇವೆ. ಪಕ್ಷ ಹಾಗೂ ಸರ್ಕಾರದ ಹಂತದಲ್ಲಿ ಎಲ್ಲ ಸಮುದಾಯವರಿಗೂ ಆದ್ಯತೆ ನೀಡಲಾಗಿದೆ. ಆದರೆ ಯಾವ ದೃಷ್ಟಿಯಿಂದ ಹೇಳಿದ್ದಾರೋ ಗೊತ್ತಿಲ್ಲ. ಬಸವರಾಜ ರಾಯರೆಡ್ಡಿ ಅವರೇ ಪೂರ್ಣ ದಾಖಲೆ ಬಿಡುಗಡೆ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net