ಲಾಂಚ್ ಸಿಬ್ಬಂದಿಗೆ ಶೀಘ್ರ ವೇತನ

selvamani
Published on

ಶಿವಮೊಗ್ಗ: ಸಾಗರ ತಾಲೂಕು ಹೊಳೆಬಾಗಿಲು ಸೇರಿದಂತೆ ವಿವಿಧ ಲಾಂಚ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಒಂದು ವರ್ಷದಿಂದ ವೇತನ ನೀಡಿಲ್ಲ ಎಂಬ ಅಂಶ ತಡವಾಗಿ ನನ್ನ ಗಮನಕ್ಕೆ ಬಂದಿದೆ. ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಲಾಂಚ್ ಸಿಬ್ಬಂದಿಗೆ ವೇತನ ನೀಡಬೇಕಿತ್ತು. ಯಾವ ಕಾರಣಕ್ಕೆ ವೇತನ ವಿಳಂಬವಾಯಿತು ಎಂಬುದು ತಿಳಿದಿಲ್ಲ. ಆದರೆ ಕೂಡಲೇ ವೇತನ ಪಾವತಿಗೆ ಸೂಚಿಸಿದ್ದೇನೆ. ಇನ್ನೊಂದು ವಾರದಲ್ಲಿ ಸಿಬ್ಬಂದಿಗೆ ವೇತನ ಸಿಗಲಿದೆ ಎಂದು ಡಾ.ಆರ್.ಸೆಲ್ವಮಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ

ಪ್ರಮುಖ ಪ್ರವಾಸಿ ತಾಣವಾಗಿರುವ ಕೊಡಚಾದ್ರಿಯಲ್ಲಿ ಪ್ರವಾಸಿಗರು ಹಾಗೂ ಬಾಡಿಗೆ ಜೀಪ್‌ಗಳ ಚಾಲಕರ ನಡುವೆ ಉಂಟಾಗುತ್ತಿರುವ ಸಂಘರ್ಷದ ಬಗ್ಗೆ ಮಾಧ್ಯಮಗಳಿಂದ ತಿಳಿದು ಬಂದಿದೆ. ಇನ್ನೊಂದು ವಾರದೊಳಗೆ ಎಸ್ಪಿ ಹಾಗೂ ಆರ್‌ಟಿಒ ಅವರೊಂದಿಗೆ ಕೊಡಚಾದ್ರಿಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿಯುತ್ತೇನೆ. ಬಳಿಕ ಸಂಘರ್ಷಕ್ಕೆ ಎಡೆಮಾಡಿಕೊಡದಂತೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಡಿಸಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net