ಬಸವೇಶ್ವರ ಸಮಾಜಕ್ಕೆ ಜ್ಯೋತಿಪ್ರಕಾಶ್ ಅಧ್ಯಕ್ಷ

jyothi
Published on

ಶಿವಮೊಗ್ಗ: ನಗರದ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ಚುನಾವಣೆ ಬುಧವಾರ ನಡೆದಿದ್ದು, ಅಧ್ಯಕ್ಷರಾಗಿ ಎಸ್.ಎಸ್.ಜ್ಯೋತಿಪ್ರಕಾಶ್-ಎನ್.ಜೆ.ರಾಜಶೇಖರ್ ಬಣದ ನಾಲ್ವರು ಅಧಿಕಾರ ಪಡೆಯುವಲ್ಲಿ ಸಫಲರಾದರು. ಎಸ್.ಎಸ್.ಜ್ಯೋತಿಪ್ರಕಾಶ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಎಸ್.ಪಿ.ದಿನೇಶ್ ಕಾರ್ಯದರ್ಶಿ ಸ್ಥಾನಕ್ಕೇರುವ ಮೂಲಕ ಎದುರಾಳಿ ತಂಡಕ್ಕೆ ಶಾಕ್ ನೀಡಿದ್ದಾರೆ.

ಕಾರ್ಯದರ್ಶಿ ಸ್ಥಾನಕ್ಕೆ ಟಿ.ಬಿ.ಜಗದೀಶ್ ಹಾಗೂ ಎಸ್.ಪಿ.ದಿನೇಶ್ ಸ್ಪರ್ಧಿಸಿದ್ದರು. ದಿನೇಶ್ ಪರವಾಗಿ ಎಂಟು ಮತಗಳು ಚಲಾವಣೆಯಾದರೆ ಜಗದೀಶ್ ಏಳು ಮತವನ್ನು ಪಡೆದು ಸೋಲು ಕಾಣಬೇಕಾಯಿತು. ಕೆ.ಎಸ್. ತಾರಾನಾಥ್, ಎಂ.ಆರ್.ಪ್ರಕಾಶ್ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದರು. ತಾರಾನಾಥ್ ನಿರೀಕ್ಷೆಯಂತೆ ಗೆಲುವು ಸಾಧಿಸಿದರು.

ಸಹಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಶ್ ಮೂರ್ತಿ ವಿರುದ್ಧ ಬಳ್ಳೇಕೆರೆ ಸಂತೋಷ್ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಾ ಆನಂದ್ ಹಾಗೂ ಅನಿತಾ ರವಿಶಂಕರ್ ನಾಮಪತ್ರ ಸಲ್ಲಿಸಿದ್ದರು. ಎಸ್.ಪಿ.ದಿನೇಶ್ ತಂಡದಿಂದ ಗೆದ್ದಿದ್ದ ಅನಿತಾ ರವಿಶಂಕರ್ ಕಡೇ ಕ್ಷಣದಲ್ಲಿ ನಾಪತ್ರ ಹಿಂಪಡೆದಿದ್ದರಿಂದ ಶಾಂತಾ ಆನಂದ್ ಹಾದಿ ಸುಗಮವಾಯಿತು.

ಆ.21ರಂದು ನಡೆದಿದ್ದ ಚುನಾವಣೆಯಲ್ಲಿ ಎಸ್.ಎಸ್.ಜ್ಯೋತಿಪ್ರಕಾಶ್-ಎನ್.ಜೆ.ರಾಜಶೇಖರ್ ನೇತೃತ್ವದ ತಂಡದಿಂದ ಎಂಟು ಹಾಗೂ ಎಸ್.ಪಿ.ದಿನೇಶ್ ನೇತೃತ್ವದ ತಂಡದಿಂದ ಏಳು ನಿರ್ದೇಶಕರು ಆಯ್ಕೆಯಾಗಿದ್ದರು. ಹೀಗಾಗಿ ಬಹುಮತ ಹೊಂದಿರುವ ಜ್ಯೋತಿ ಪ್ರಕಾಶ್ ತಂಡದವರೇ ಎಲ್ಲ ಸ್ಥಾನಗಳಿಗೂ ಆಯ್ಕೆಯಾಗಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಈ ತಂಡದಿಂದ ನಡೆದ ಒಂದು ಅಡ್ಡ ಮತದಾನ ಎಸ್.ಪಿ.ದಿನೇಶ್ ಅವರಿಗೆ ವರವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net