ವಿನಯ್ ಗುರೂಜಿ ಜನ್ಮದಿನಕ್ಕೆ ಸಾಮಾಜಿಕ ಕಾರ್ಯ

24 smg 4a
Published on

ಶಿವಮೊಗ್ಗ: ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಜನ್ಮದಿನದ ನಿಮಿತ್ತ ಬುಧವಾರ ಶಿವಮೊಗ್ಗದ ಸರ್ಜಿ ಫೌಂಡೇಶನ್, ಗೌರಿಗದ್ದೆ ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ಹಾಗೂ ಹಲವು ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ರಕ್ತದಾನ, ಅನ್ನಸಂತರ್ಪಣೆ ಸೇರಿ ವಿವಿಧ ಸಾಮಾಜಿಕ ಕಾರ್ಯಗಳು ನಡೆದವು.

ಸರ್ಜಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಯಿತು. ಸಮಾಜಮುಖಿ ಸಂಘಟನೆಗಳು, ವಿನಯ್ ಗುರೂಜೀ ಅನುಯಾಯಿಗಳು, ಅಭಿಮಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ನಗರದ ಖಾಸಗಿ ಬಸ್ ನಿಲ್ದಾಣ, ಮೆಗ್ಗಾನ್ ಆಸ್ಪತ್ರೆ, ರೈಲ್ವೆ ನಿಲ್ದಾಣದಲ್ಲಿ ಅನ್ನ ದಾಸೋಹ ನೆರವೇರಿತು.

ಸರ್ಜಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಮಾತನಾಡಿ, ಜಾತಿ-ಧರ್ಮ ಮೀರಿದ ದಾನ ರಕ್ತದಾನ. ರಕ್ತದಾನಿಯೊಬ್ಬ ನಾಲ್ಕು ಜನರ ಪ್ರಾಣ ಉಳಿಸಬಲ್ಲ, ಅಂಗಾಗ ದಾನಗಳ ಮೂಲಕ ಎಂಟು ಜೀವಕ್ಕೆ ಆಸರೆಯಾಗಬಲ್ಲ. ಇಂಥಹ ಶ್ರೇಷ್ಠ ದಾನಗಳಿಂದ ಇನ್ನೊಬ್ಬರ ದೇಹದಲ್ಲಿ ಜೀವಿಸಬಲ್ಲ. ಮಾನವೀಯ ಮೌಲ್ಯಗಳ ಪ್ರತಿಪಾದಕ ವಿನಯ್ ಗುರೂಜಿ ಜನ್ಮದಿನದಂದು ರಕ್ತದಾನ ಮಹತ್ವಪೂರ್ಣವಾದದ್ದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net