ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ

23 smg 11
Published on

ಶಿವಮೊಗ್ಗ: ಕಾರಾಗೃಹಗಳಲ್ಲಿ ಮೊಬೈಲ್, ಗಾಂಜಾ ಬಳಕೆ ಸೇರಿದಂತೆ ಹಲವುಗಳು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾ ಪೊಲೀಸರು ಸೋಗಾನೆ ಸಮೀಪದ ಓತಿಘಟ್ಟದಲ್ಲಿ ಕೇಂದ್ರ ಕಾರಾಗೃಹದ ದಾಳಿ ನಡೆಸಿ ಕೈದಿಗಳ ಕೊಠಡಿಗಳನ್ನು ಪರಿಶೀಲಿಸಿದರು.

ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ 150 ಪೊಲೀಸರು ಬೆಳಗ್ಗೆಯೇ ಜೈಲಿಗೆ ತೆರಳಿ ಕೊಠಡಿಗಳನ್ನು ಜಾಲಾಡಿದ್ದಾರೆ. ಸುಮಾರು ಎರಡೂವರೆ ಗಂಟೆ ಹುಡುಕಾಟ ನಡೆಸಿದ್ದು ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಶಿವಮೊಗ್ಗ ಜೈಲಿನಲ್ಲಿ ಮೊಬೈಲ್ಗಳ ಹಾವಳಿ ಹೆಚ್ಚಾಗಿತ್ತು. ಇದು ಪೊಲೀಸ್ ಇಲಾಖೆಗೂ ತಲೆನೋವು ತಂದಿತ್ತು. ಈ ಸಂಬಂಧ ಜೈಲರ್ ರಮೇಶ್ ಅಮಾನತ್ತುಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net