ವಾಣಿಜ್ಯ ಬೆಳೆಯಿಂದ ಆಹಾರ ಧಾನ್ಯ ಕುಂಠಿತ

dr.sree basava marulasidda swamiji
Published on

ಶಿವಮೊಗ್ಗ: ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದು ಮುಂದೊಂದು ದಿನ ಆಹಾರಧಾನ್ಯಕ್ಕೆ ಪರಿತಪಿಸುವ ದಿನ ಎದುರಾಗುವ ಸಾಧ್ಯತೆ ಇದೆ ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಕುವೆಂಪು ರಂಗಮಂದಿರದಲ್ಲಿ ಗುರುವಾರ ರೈತ ದಸರಾದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ರೈತರು ಅಡಕೆ ಸೇರಿದಂತೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಇದರಿಂದ ಆದಾಯ ಹೆಚ್ಚಳವಾಗಬಹುದು. ಆದರೆ ಮುಂದೊಂದು ದಿನ ಆಹಾರ ಬೆಳೆಗಾಗಿ ಪರಿತಪಿಸುವ ದಿನ ಬರಲಿದೆ ಎಂದರು.

20 ವರ್ಷಗಳ ಹಿಂದೆ ಮನೆಯಲ್ಲೇ ಬೆಳೆದ ಆಹಾರ ಧಾನ್ಯಗಳನ್ನು ಬಳಸುತ್ತಿದ್ದೆವು. ಆದರೆ ಈಗ ಬೆಳೆದ ಬೆಳೆಯನ್ನು ಆಹಾರವಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಅಡಕೆ, ಮೆಕ್ಕೆಜೋಳವನ್ನು ಎಷ್ಟು ತಿನ್ನಲಿಕ್ಕೇ ಸಾಧ್ಯ ಎಂದು ಪ್ರಶ್ನಿಸಿದರು. ನಮ್ಮ ಬೆಳೆಗಳನ್ನು ಬಳಸಲು ಆಗದೇ ದೂರದ ರಾಜಸ್ಥಾನ, ಮಧ್ಯಪ್ರದೇಶ, ಒಡಿಸ್ಸಾ ರಾಜ್ಯಗಳನ್ನು ಆಶ್ರಯಿಸುತ್ತಿರುವುದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net