ಶಿವಮೊಗ್ಗಕ್ಕೆ ಪರೀಕ್ಷಾರ್ಥ ಬಂದಿಳಿದ ಭಾರತೀಯ ವಾಯು ಸೇನೆ ವಿಮಾನ

21 smg 8
Published on

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಫೆ.27ರಂದು ಉದ್ಘಾಟನೆಗೆ ಸಜ್ಜಾಗಿರುವ ಬೆನ್ನಲ್ಲೇ ಮಂಗಳವಾರ ಮಧ್ಯಾಹ್ನ ಪರೀಕ್ಷಾರ್ಥವಾಗಿ ಭಾರತೀಯ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿಯಿತು.

ವಾಯು ಸೇನೆಯ ಬೋಯಿಂಗ್ 737 7ಎಚ್1 ಮಾದರಿ ವಿಮಾನ ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಮಧ್ಯಾಹ್ನ 12ಕ್ಕೆ ನವದೆಹಲಿಯಿಂದ ಹೊರಟ ವಿಮಾನ 2.30ರ ಹೊತ್ತಿಗೆ ವಿಮಾನ ಲ್ಯಾಂಡ್ ಆಯಿತು.

ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು ಮಧ್ಯಾಹ್ನ ವಿಮಾನ ಬರುತ್ತಿದ್ದಂತೆ ಸುತ್ತಮುತ್ತಲ ಪ್ರದೇಶಗಳ ಜನರು, ವಿಮಾನ ನಿಲ್ದಾಣದ ಕಾರ್ಮಿಕರು, ಭದ್ರತಾ ಸಿಬ್ಬಂದಿ ಕುತೂಹಲದಿಂದ ವೀಕ್ಷಿಸಿ ಖುಷಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net