

ಶಿವಮೊಗ್ಗ: ನಗರ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಡಾ. ಬಿ.ಲೋಲಿತ್ ಮೃತ ದುರ್ದೈವಿ. ಗೋಪಾಳದಲ್ಲಿರುವ ತಮ್ಮ ನಿವಾಸ ಬುಧವಾರ ರಾತ್ರಿ ಮಲಗಿದ್ದರು. ಗುರುವಾರ ಬೆಳಗ್ಗೆ ಲೋಲಿತ್ ನೇಣುಬಿಗಿದ ಸ್ಥಿತಿಯಲ್ಲಿ ಗೆ ಶರಣಾಗಿದ್ದಾರೆ.
ಕಳೆದ ವರ್ಷ ಡಾ.ಲೋಲಿತ್ಗೆ ಮದುವೆ ಆಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದರು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.