ದೇವರ ದಾಸಿಮಯ್ಯ ಸಜ್ಜನ, ದೈವಭಕ್ತ: ಎಡಿಸಿ ಜಿ.ಅನುರಾಧಾ

IMG_9094
Published on

ಶಿವಮೊಗ್ಗ: ದೇವರ ದಾಸಿಮಯ್ಯ ಸಜ್ಜನ, ದೈವಭಕ್ತ ಮತ್ತು ಧಾರಾಳತನವುಳ್ಳವರೂ ಆಗಿದ್ದರು. ಯಾರೇ ಸಂಕಕಷ್ಟದಲ್ಲಿದ್ದರೂ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ವಚನಗಳ ಮೂಲಕ ವಿಶ್ವಕ್ಕೆ ಸಾರಿದರು ಎಂದು ಎಡಿಸಿ ಜಿ.ಅನುರಾಧಾ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಶಿವನ ಮೇಲೆ ಅಪಾರ ನಂಬಿಕೆ ಇಟ್ಟು ದೈವತ್ವದಲ್ಲೇ ತಮ್ಮ ಕಾಯಕವನ್ನು ಕಂಡುಕೊಂಡಿದ್ದರು ಎಂದರು.

ಆದಿ ಕಾಲದಿಂದಲೂ ಅನೇಕ ಋಷಿಮುನಿಗಳು ತಮ್ಮ ಅಮೋಘ ತಪಸ್ಸಿನಿಂದ ಸಿದ್ಧಿ ಪಡೆದು ಅಧ್ಯಾತ್ಮದ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದಂತಹ ಸಾಧುಗಳಲ್ಲಿ ದಾಸಿಮಯ್ಯ ಕೂಡ ಒಬ್ಬರು. ದೇವರನ್ನು ಒಲಿಸಿಕೊಳ್ಳಲು ಸನ್ಯಾಸತ್ವವೇ ಸನ್ಮಾರ್ಗವೆಂದು ಅರಿತು ಸಿದ್ಧಿಸಿಕೊಳ್ಳಲು ತಪಸ್ಸು ಮಾಡಿದರು. ಅಧ್ಯಾತ್ಮ ಸಿದ್ಧಿಸಿದ ಬಳಿಕ ದೇವರು ಹಾಗೂ ಮಾನವರಿಗೆ ತಮ್ಮ ಮಾನ-ಶರೀರ ರಕ್ಷಣೆಗೆ ವಸ್ತ್ರ ತಯಾರಿಸುವ ಕಾರ್ಯ ಆಗಬೇಕಿದೆ ಎಂಬ ಶಿವನಿಚ್ಛೆಯಂತೆ ವಸ್ತ್ರ ನಿರ್ಮಿಸುವ ಕಲೆಯನ್ನು ಮೈಗೂಡಿಸಿಕೊಂಡರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮಲ್ನಾಡ್ ದೇವಾಂಗ ಸಮಾಜದ ಅಧ್ಯಕ್ಷ ಗಿರಿಯಪ್ಪ, ಕಾರ್ಯದರ್ಶಿ ಜಿ.ಮೋಹನ್‌ಮೂರ್ತಿ, ನಗರ ದೇವಾಂಗ ಸಂಘದ ಅಧ್ಯಕ್ಷ ಡಿ.ಸತೀಶ್, ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಕೆ.ಸುಲೋಚನಾ ಶಂಕರಮೂರ್ತಿ, ಸಮಾಜದ ಮುಖಂಡರಾದ ಕಾಂತೇಶ್, ಶಿವಾನಂದಸ್ವಾಮಿ, ಎಸ್.ಎಸ್.ವಿಜಯ ಭಾಸ್ಕರ್, ಮಂಜುನಾಥ್, ರಾಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net