

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ 'ಸುಖಿ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಖಾಸಗಿವಾಹಿನಿ ಜತೆ ಮಾತನಾಡಿದ ಅವರು, "ನಾನು ಗರ್ಭಧಲ್ಲಿದ್ದಾಗ, ತಾಯಿಯ ಸ್ಥಿತಿ ಗಂಭೀರವಾದ ಕಾರಣ ಗರ್ಭಪಾತ ಅನಿವಾರ್ಯ ಎಂದು ಎಲ್ಲರೂ ಭಾವಿಸಿದ್ದರು. ನನ್ನ ತಾಯಿಗೆ ವೈದ್ಯರು ಗರ್ಭಪಾತ ಮಾಡುವಂತೆ ಸೂಚಿಸಿದರು. ಏಕೆಂದರೆ ಅವಳು ನಿರಂತರವಾಗಿ ರಕ್ತಸ್ರಾವವಾಗುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಹುಟ್ಟಿದ್ದೇನೆ ಎಂದು ಶಿಲ್ಪಾ ಹೇಳಿದ್ದಾರೆ.
ನನ್ನ ಹುಟ್ಟಿನ ಹಿಂದೆ ಯಾವುದೋ ಬಲವಾದ ಕಾರಣ ಇದ್ದಿರಬೇಕು.. ನನಗೆ ಇದು ಪುನರ್ಜನ್ಮ. ಪ್ರತಿಯೊಬ್ಬರ ಜೀವನದಲ್ಲೂ ಹಲವು ಕಷ್ಟಗಳು ಇದ್ದೇ ಇರುತ್ತವೆ ಹಾಗಾಗಿ ಅವರಲ್ಲಿ ಸ್ಫೂರ್ತಿ ತುಂಬಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ. ಬದುಕು ಯಾರಿಗೂ ಸುಲಭವಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ವಯಸ್ಸು 50 ಸಮೀಪಿಸಿದರೂ ಅಚ್ಚಳಿಯದ ಸೌಂದರ್ಯ ಹೊಂದಿದ್ದಾರೆ ಶಿಲ್ಪಾ ಶೆಟ್ಟಿ. ಬಾಲಿವುಡ್ ನಟ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿರುವ ನಟಿಯಾಗಿ ಸಿನಿಮಾಗಳಲ್ಲಿಯೂ ತೊಡಗಿಕೊಂಡಿದ್ದಾರೆ. ‘ಸುಖಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಶಿಲ್ಪಾ ಶೆಟ್ಟಿ ಅಭಿನಯದ 'ಸುಖಿ' ಚಿತ್ರದ ಮೂಲಕ ಸೋನಾಲ್ ಜೋಶಿ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಮಿತ್ ಸೌಧ್, ಕುಶಾ ಕಪಿಲಾ, ಪಾವ್ಲೀನ್ ಗುಜ್ರಾಲ್, ದಿಲ್ನಾಜ್ ಇರಾನಿ, ಚೈತನ್ಯ ಚೌಧರಿ ಮತ್ತು ಜ್ಯೋತಿ ಕಪೂರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 22 ರಂದು ಬಿಡುಗಡೆಯಾಗಲಿದೆ.
ಶಿಲ್ಪಾ ಶೆಟ್ಟಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 'ಬಾಜಿಗರ್' ಚಿತ್ರದ ಮೂಲಕ ಬಾಲಿವುಡ್ ಪರದೆಯನ್ನು ಪ್ರವೇಶಿಸಿದರು. ಅವರು ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ತಮ್ಮದೇ ಆದ ವಿಶೇಷ ಮನ್ನಣೆಯನ್ನು ಪಡೆದಿದ್ದಾರೆ.