ನಾಲ್ಕು ವರ್ಷದ ಪುತ್ರಿಗೆ ಕನ್ಯಾಪೂಜೆ ನೆರವೇರಿಸಿದ ಶಿಲ್ಪಾಶೆಟ್ಟಿ! ಕಾರಣ ಹೀಗಿದೆ ನೋಡಿ..

shilphs
Published on

ಮುಂಬೈ: ಚೈತ್ರ ನವರಾತ್ರಿಯಲ್ಲಿ ಬರುವ ಅಷ್ಟಮಿ ಹಬ್ಬದ ಪ್ರಯುಕ್ತ ಖ್ಯಾತ ನಟಿ ಶಿಲ್ಪಾ ಶೆಟ್ಟಿ ತನ್ನ ನಾಲ್ಕು ವರ್ಷದ ಮಗಳು ಸಮೀಷಾಳ ಪಾದಗಳನ್ನು ತೊಳೆದು ಕನ್ಯಾಪೂಜೆ ನೆರವೇರಿಸಿದರು .

'ಸಮೀಷಾ ದೇವಿಗೆ ಕನ್ಯಾಪೂಜೆ ಮಾಡುವ ಮೂಲಕ ಅಷ್ಟಮಿಯ ಶುಭ ಮುಹೂರ್ತವನ್ನು ಆಚರಿಸುತ್ತಿದ್ದೇವೆ. ಮಹಾಗೌರಿ ಎಲ್ಲರಿಗೂ ಸಂಪತ್ತು, ಪ್ರೀತಿ ಮತ್ತು ಶಾಂತಿಯಿಂದ ಆಶೀರ್ವದಿಸಲಿ' ಎಂದು ಶಿಲ್ಪಾ ಶೆಟ್ಟಿ ಕನ್ಯಾಪೂಜೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲಿ ಚೈತ್ರ ನವರಾತ್ರಿಯ ಎಂಟನೇ ದಿನವಾದ ಅಷ್ಟಮಿಯಂದು ಕನ್ಯಾ ಪೂಜೆಗಾಗಿ ಹೆಣ್ಣುಮಕ್ಕಳ ಪಾದಗಳನ್ನು ತೊಳೆದು ಪೂಜಿಸಲಾಗುತ್ತದೆ.

ಪಿಂಕ್ ಕ್ರಾಪ್ ಟಾಪ್ ಮತ್ತು ಸ್ಕರ್ಟ್ ಧರಿಸಿರುವ ಸಮೀಷಾಗೆ ತಾಯಿ ಶಿಲ್ಪಾಶೆಟ್ಟಿ ಪಾದಗಳನ್ನು ತೊಳೆದು, ಆರತಿ ಮಾಡಿ ಪ್ರಸಾದ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಶಿಲ್ಪಾ ಅವರ ಮನೆಯ ಪೂಜಾ ಕೊಠಡಿಯಲ್ಲಿ ಸಮಾರಂಭ ನಡೆಯಿತು. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ 2009 ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net