ಬ್ಲೂ ಫಿಲ್ಮ್​ ಕೇಸ್​ನಲ್ಲಿ ಪತಿ ಅರೆಸ್ಟ್​; ನಟಿ ಶಿಲ್ಪಾ ಶೆಟ್ಟಿ 'ಚಾಪ್ಟರ್​' ಕ್ಲೋಸ್​?

Untitled-1
Published on

ನವದೆಹಲಿ: ಅತ್ತ ಬ್ಲೂ ಫಿಲ್ಮ್​ ಕೇಸ್​​ನಲ್ಲಿ ಪತಿ ರಾಜ್​ ಕುಂದ್ರಾ ಬಂಧನವಾಗುತ್ತಿದ್ದಂತೆ ಇತ್ತ ಪತ್ನಿ ಶಿಲ್ಪಾ ಶೆಟ್ಟಿ 'ಚಾಪ್ಟರ್'​ ಕುರಿತ ಕುತೂಹಲ ಉಂಟಾಗಿದೆ. ಅವರಿರುವ 'ಚಾಪ್ಟರ್' ಕ್ಲೋಸ್​ ಆಗಲಿದೆಯೇ ಅಥವಾ ಅವರ ಬದಲಿಗೆ ಬೇರೆಯವರು ಇರುವ 'ಚಾಪ್ಟರ್' ತೆರೆದುಕೊಳ್ಳಲಿದೆಯೇ ಎಂಬ ಕೌತುಕ ಕೂಡ ಉಂಟಾಗಿದೆ.

ಶಿಲ್ಪಾ ಶೆಟ್ಟಿ ಜಡ್ಜ್​ ಆಗಿರುವ 'ಸೂಪರ್ ಡಾನ್ಸರ್​- ಚಾಪ್ಟರ್​ 4' ರಿಯಾಲಿಟಿ ಶೋ ಈಗ ಎಲ್ಲರ ಗಮನವನ್ನು ಸೆಳೆಯಲಾರಂಭಿಸಿದೆ. ಅದಕ್ಕೆ ಪೂರಕವೆಂಬಂತೆ ಇಂದು ಮತ್ತೆ ಆರಂಭವಾಗಿರುವ ಶೂಟಿಂಗ್​ಗೆ ಬರಬೇಕಿದ್ದ ಶಿಲ್ಪಾ ಶೆಟ್ಟಿ ಗೈರಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಇನ್ನು ಇವತ್ತಿನ ಶೂಟಿಂಗ್​ನಲ್ಲಿ ಅವರ ಬದಲಿಗೆ ಬೇರೆ ಯಾರೂ ಕಾಣಿಸಿಕೊಂಡಿಲ್ಲ.

ಮತ್ತೊಂದೆಡೆ ಕರಿಷ್ಮಾ ಕಪೂರ್​ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ 'ಸೂಪರ್ ಡಾನ್ಸರ್​- ಚಾಪ್ಟರ್​ 4' ಇದೀಗ ಸಾಕಷ್ಟು ಕುತೂಹಲ ಉಂಟುಮಾಡಿದೆ. ಇನ್ನೊಂದೆಡೆ ಶಿಲ್ಪಾ ಪತಿ ರಾಜ್​ ಕುಂದ್ರಾ ಅವರನ್ನು ಜುಲೈ 23ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net