

ಶಿಗ್ಗಾಂವಿ: ಎಸ್ಸೆಸ್ಸೆಲ್ಸಿ ವಿದ್ಯಾಥಿರ್ಗಳು ಪರೀೆ ಸಮಯದಲ್ಲಿ ಭಯ ಬಿಟ್ಟು ಸಮಾಧಾನದಿಂದ ಉತ್ತರ ಬರೆದಾಗ ಮಾತ್ರ ಉತ್ತಮ ಅಂಕಗಳಿಸುವ ಜತೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಹಾವೇರಿ ಕೆಎಲ್ಇ ಕೊಳ್ಳಿ ಕಾಲೇಜ್ನ ಪ್ರಾಚಾರ್ಯ ಪ್ರದಿಪ ಗಡ್ಡಿಗೌಡರ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹಾವೇರಿಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್ನ ಸಹಯೋಗದಲ್ಲಿ ಎಸ್ಬಿ ಬಿ ಮಾಮಲೆ ದೇಸಾಯಿ ಮತ್ತು ನಳಂದಾ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾಥಿರ್ಗಳಿಗೆ ಒಂದು ದಿನದ ಪ್ರೇರಣಾ ಕಾರ್ಯಾಗಾರ ಸ್ಫೂತಿರ್&-2025 ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ನೀಡಿದರು.
ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಬಿ.ವಿ. ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಉಪ ಪ್ರಾಚಾರ್ಯ ಕೆ.ಬಿ. ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಸಾವಿತ್ರಿ ನಾಯಕ, ಗಂಗಾಧರ ಸಾಲಿಮಠ, ಎ.ಎಫ್. ಚೌಧರಿ, ದಾದಾಪೀರ ಗುತ್ತಲ ಮತ್ತಿತರರು ಉಪಸ್ಥಿತರಿದ್ದರು.