ಶಿಗ್ಗಾಂವಿ ಉಪ ಚುನಾವಣೆ ಲೈಸನ್​ ಅಧಿಕಾರಿಗಳ ನೇಮಕ

je721538035802367-abc
Published on

ಹಾವೇರಿ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾಚಣೆ ಹಿನ್ನಲೆಯಲ್ಲಿ ಸಾಮಾನ್ಯ ವೀಕ್ಷಕರಿಗೆ ಹಾಗೂ ವೆಚ್ಚ ವೀಕ್ಷಕರಿಗೆ ಲೈಸನ್​ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.

ಸಾಮಾನ್ಯ ವೀಕ್ಷಕರಿಗೆ ಲೈಸನ್​ ಅಧಿಕಾರಿಯಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಶೋಕ ಗದ್ದಿಗೌಡರ (9402216015) ಹಾಗೂ ವೆಚ್ಚ ವೀಕ್ಷಕರಿಗೆ ಲೈಸನ್​ ಅಧಿಕಾರಿಯಾಗಿ ಡಯಟ್​ ಹಿರಿಯ ಉಪನ್ಯಾಸಕ ಎಂ.ಎಚ್​. ಪಾಟೀಲ (9449570905) ಅವರನ್ನು ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net