ಮೋದಿ ಬಿಟ್ಟರೆ ಬಿಜೆಪಿಗೆ ಬೇರೆ ನಂಬಿಕೆ ಇಲ್ಲವೆಂದ ಶೆಟ್ಟರ್

Jagadeesh Shettar
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ದೆಹಲಿಯಲ್ಲಿ ಪಕ್ಷದ ಪ್ರಮುಖ ಸಭೆಯಲ್ಲಿ ಪಾಲ್ಗೊಂಡು ಹಲವು ಸಲಹೆ ನೀಡಿದ್ದಾರೆ.

ಬಿಜೆಪಿಗರು ಕೇವಲ ಮೋದಿಯನ್ನು ಮಾತ್ರ ನಂಬಿಕೊಂಡಿದ್ದಾರೆ. ಮೋದಿ ಬಿಟ್ಟರೆ ಬೇರೆ ಯಾವುದೇ ಫ್ಯಾಕ್ಟರ್ ಬಿಜೆಪಿ ಬಳಿ ಇಲ್ಲ. ವಿಧಾನಸಭಾ ಚುನಾವಣೆಗೂ ಸಹ ಅವರು ಬಳಸಿದ್ದು ಮೋದಿ ಹೆಸರನ್ನೇ. ಲೋಕಸಭೆಗೂ ಸಹ ಮೋದಿ, ಮೋದಿ ಅಂತಲೇ ಚುನಾವಣೆಗೆ ಹೋಗುತ್ತಾರೆ.

ಮೋದಿ ಬಿಟ್ಟರೆ ಬೇರೆ ಯಾವುದೇ ನಂಬಿಕೆ ರಾಜ್ಯ ಬಿಜೆಪಿಯವರಿಗೆ ಇಲ್ಲ ಎಂದು ಹೈಕಮಾಂಡ್‌ಗೆ ವಿವರಿಸಿದ್ದಾರೆ.

ಬಿಜೆಪಿಯವರ ಮೋದಿ ಹೊರತಾದ ಬೇರೆ ಅಸ ಇಲ್ಲದೇ ಇರುವ ಸಂಗತಿಯ ಸದುಪಯೋಗ ನಾವು ಪಡೆದುಕೊಂಡರೆ ಒಳ್ಳೆಯದಾಗಲಿದೆ ಎಂದ ಶೆಟ್ಟರ್ ಅಭಿಪ್ರಾಯ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net