

ಹಾವೇರಿ: ಮೌಢ್ಯತೆ ಹಾಗೂ ಬಾಯಿ ಚಪಲದ ಹಬ್ಬದಾಚರಣೆಗೆ ಬ್ರೇಕ್ ಹಾಕಿ, ಅವುಗಳಿಂದ ಹೊರಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಕುರುಬ ಸಮಾಜ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕು ಶ್ರೀ ಕನಕ ನೌಕರರ ಸಂಘ ವತಿಯಿಂದ ನಗರದ ಕೆಇಬಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕನಕ ನೌಕರರ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಯುವ ಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಂರ್ಪೂಣವಾಗಿ ಮುಳುಗಿ ಮಿಂದೆದ್ದಿದೆ. ಪುಸ್ತಕ ಜ್ಞಾನ ಕುಂಠಿತವಾಗುತ್ತಿದೆ. ಪುಸ್ತಕ ಓದಬೇಕಾದರೆ ಮಸ್ತಕ ಚೆನ್ನಾಗಿರಬೇಕು. ಮಸ್ತಕ ಚೆನ್ನಾಗಿದ್ದರೆ ಮಾತ್ರ ಪುಸ್ತಕವನ್ನು ಅರಿದು ಬರೆಯಬಹುದು. ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ನಾವು ಕಲಿತ ವಿದ್ಯೆ ನಮ್ಮನ್ನ ರಕ್ಷಣೆ ಮಾಡುತ್ತದೆ. ಹೊರ ದೇಶಕ್ಕೆ ಹೋದಾಗ ನಮ್ಮ ವಿದ್ಯೆ ನಮ್ಮನ್ನು ಕಾಪಾಡುತ್ತದೆ. ವಿದ್ಯೆಯನ್ನು ಗ್ರಹಿಸುವ ಶಕ್ತಿಯೂ ಚೆನ್ನಾಗಿರಬೇಕು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕುರುಬ ಸಮಾಜ ಕೃಷಿ, ಬಡತನ, ಉಪ ಕಸುಬುಗಳಿಗೆ ಹೆಚ್ಚಿನ ಮಹತ್ವ ಕೊಡುತ್ತದೆ. ಆದರೆ ಮಕ್ಕಳ ಶಿಕ್ಷಣ ಕಡೆ ಗಮನಕೊಡುವುದು ತೀರಾ ಕಡಿಮೆ. ಸಮಾಜದವರು ಹೆಚ್ಚು ಜಾಗರೂಕರಾಗಬೇಕಿದೆ. ಉತ್ತಮ ಅಕ್ಷರ ಜ್ಞಾನ ಪಡೆದುಕೊಳ್ಳುವ ಕೆಲಸವಾಗಬೇಕಿದೆ. ಮಕ್ಕಳಿಗೆ ಆಸ್ತಿ ಮಾಡದೆ, ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು. ಹಾವೇರಿಯಲ್ಲಿ ಕೂಡ ಕನಕಭವನ ನಿಮಾರ್ಣಕ್ಕೆ ಮನವಿ ಸಲ್ಲಿಸಿದರೆ ಶಾಸಕ ರುದ್ರಪ್ಪ ಲಮಾಣಿ, ನಾವು ಸೇರಿ ಸಿಎಂ ಜತೆಗೆ ಚಚಿರ್ಸಿ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ತಾಲೂಕು ಸಂಘದ ಅಧ್ಯಕ್ಷ ಎಸ್.ಎನ್. ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾಥಿರ್ಗಳಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
- ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ವಿಜಯಕುಮಾರ ಮುದಕಣ್ಣನವರ, ನಿಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಕೆ., ಶರಣಮ್ಮ ಕೆ., ಮಲ್ಲೇಶ ಕರಿಗಾರ, ರೇಣುಕಾ ಎಸ್., ಡಾ.ರಾಘವೇಂದ್ರ ಜಿಗಳಿಕೊಪ್ಪ, ಕರಿಯಲ್ಲಪ್ಪ ಡಿ.ಕೆ, ರಾಮಕೃಷ್ಣ ಕೆ., ಮುನಿರಾಜು, ಅಶೋಕ ನಡಕಟ್ಟಿನ ಮತ್ತಿತರರಿದ್ದರು.