ಫಿಲ್ಮ್​ ಆ್ಯಂಡ್​ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಅಧ್ಯಕ್ಷರಾಗಿ ಶೇಖರ್​ ಕಪೂರ್ ನೇಮಕ..

Shekhar
Published on

ನವದೆಹಲಿ: ಫಿಲ್ಮ್​ ಆ್ಯಂಡ್ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ನೂತನ ಅಧ್ಯಕ್ಷರಾಗಿ ಚಿತ್ರ ನಿರ್ದೇಶಕ ಶೇಖರ್ ಕಪೂರ್ ಅವರನ್ನು ನೇಮಿಸಲಾಗಿದೆ.

ಫಿಲ್ಮ್​ ಆ್ಯಂಡ್ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ(ಎಫ್​​ಟಿಐಐ) ನೂತನ ಅಧ್ಯಕ್ಷ ಹಾಗೂ ಎಫ್​ಟಿಐಐ ಆಡಳಿತ ಸಮಿತಿಯ ಅಧ್ಯಕ್ಷರನ್ನಾಗಿ ಶೇಖರ್ ಕಪೂರ್ ಅವರನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನೇಮಕ ಮಾಡಿದೆ. ಶೇಖರ್ ಕಪೂರ್ ಅವರ ಅಧಿಕಾರಾವಧಿ 2023ರ ಮಾರ್ಚ್​ 3ರ ವರೆಗೆ ಇರಲಿದೆ.

1945ರ ಡಿ. 6ರಂದು ಪಾಕಿಸ್ತಾನದ ಲಾಹೋರ್​ನಲ್ಲಿ ಜನಿಸಿದ್ದ ಕಪೂರ್​, ಹಿಂದಿ ಹಾಗೂ ಅಂತಾರಾಷ್ಟ್ರೀಯ ಸಿನಿಮಾರಂಗದಲ್ಲಿ ಖ್ಯಾತರು. ಎಲಿಜಬೆತ್, ಬ್ಯಾಂಡಿಟ್ ಕ್ವೀನ್​, ದ ಫೋರ್ ಫೆದರ್ಸ್ ಮುಂತಾದ ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net