ಶೆಫಾಲಿ ನಿಧನಕ್ಕೆ ರಕ್ತದೊತ್ತಡದ ಕುಸಿತ ಕಾರಣ

6-6862cfa2b8024
Published on

ಮುಂಬೈ: ನಟಿ ಶೆಫಾಲಿ ಜರಿವಾಲಾ ಸಾವಿಗೆ ರಕ್ತದೊತ್ತಡದಲ್ಲಿನ ದಿಢೀರ್ ಕುಸಿತವೇ ಕಾರಣ ಎಂದು ಕೂಪರ್ ಆಸ್ಪತ್ರೆಯ ವೈದ್ಯರು ಶಂಕಿಸಿದ್ದಾರೆ.

ಪೊಲೀಸರು ಕೂಡ ಈ ಸಾವಿನಲ್ಲಿ ಯಾವುದೇ ಅನುಮಾನಾಸ್ಪದ ಅಂಶವಿಲ್ಲ, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಜೂನ್ 27ರಂದು ಶೆಫಾಲಿ, ತಮ್ಮ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ಪ್ರಾಥಮಿಕ ತನಿಖೆಯಲ್ಲಿ ದಿಢೀರ್ ರಕ್ತದೊತ್ತಡ ಕುಸಿತದಿಂದ ಹೃದಯ ಸ್ತಂಭನ ಉಂಟಾಗಿ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಪೊಲೀಸರು ಇದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net