

ಶಿರಾಳಕೊಪ್ಪ: ಸಮೀಪದ ನರಸಾಪುರ ಗ್ರಾಮದ ಬಳಿ ಭಾನುವಾರ ಟಾಟಾ ಏಸ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿ ಐವರು ಗಾಯಗೊಂಡಿದ್ದು, ಹತ್ತಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿವೆ. ಶಿರಾಳಕೊಪ್ಪದ ಕಡೆಯಿಂದ ಹೋಗುತ್ತಿದ್ದ ಖಾಸಗಿ ಬಸ್ ಚಿಕ್ಕೇರೂರು ಕಡೆಯಿಂದ ಬರುತ್ತಿದ್ದ ಕುರಿಗಾಹಿಗಳ ಟಾಟಾ ಏಸ್ ವಾಹನ ಪರಸ್ಪರ ಡಿಕ್ಕಿಯಾಗಿವೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿ ಉಂಟಾಗಿಲ್ಲ. ಆದರೆ ಟಾಟಾ ಏಸ್‌ನಲ್ಲಿದ್ದ ಕುರಿಗಳು ಮೃತಪಟ್ಟಿವೆ. ಐವರು ಗಾಯಗೊಂಡಿದ್ದು, ವಾಹನ ನಜ್ಜುಗುಜ್ಜಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.