'ರೌಡಿಗಳಂತೆ ಕಾಣ್ತಾರೆ, ವಿಚಿತ್ರವಾಗಿ ಹೇರ್​ ಕಟ್ ಮಾಡಿಸಿಕೊಂಡಿದ್ರೆ ತಲೆ ಬೋಳಿಸಿ'; TVK ಸಚಿವೆ ಜಗದೀಶ್ವರಿ ಹೇಳಿಕೆ ವಿರುದ್ಧ DMK ಕಿಡಿ

'ರೌಡಿಗಳಂತೆ ಕಾಣ್ತಾರೆ, ವಿಚಿತ್ರವಾಗಿ ಹೇರ್​ ಕಟ್ ಮಾಡಿಸಿಕೊಂಡಿದ್ರೆ ತಲೆ ಬೋಳಿಸಿ'; TVK ಸಚಿವೆ ಜಗದೀಶ್ವರಿ ಹೇಳಿಕೆ ವಿರುದ್ಧ DMK ಕಿಡಿ
Published on: 
  • ವಿಚಿತ್ರವಾಗಿ ಹೇರ್​ ಕಟ್ ಮಾಡಿಸಿಕೊಂಡು ಶಾಲೆಗೆ ಬಂದ್ರೆ ತಲೆ ಬೋಳಿಸಿ

  • ಮಕ್ಕಳು ಶಿಸ್ತಿನಿಂದ ಇರಬೇಕು ಎಂದ ಸಚಿವೆ ಜಗದೀಶ್ವರಿ

  • ಸಚಿವೆ ಜಗದೀಶ್ವರಿ ಹೇಳಿಕೆ ವಿರುದ್ಧ ಡಿಎಂಕೆ ನಾಯಕರಿಂದ ಹೆಚ್ಚಾಯ್ತು ಟೀಕೆ

'ಕೆಟ್ಟದಾಗಿ ಹೇರ್​ ಕಟ್ ಮಾಡಿಸಿಕೊಂಡು, ವಿಚಿತ್ರವಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳ ತಲೆ ಬೋಳಿಸಿ' ಎಂದು ತಮಿಳುನಾಡಿನ ಸಚಿವೆ ಜಗದೀಶ್ವರಿ ಅವರು ಕೊಟ್ಟಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ತಮಿಳುನಾಡಿನ ವಿರುಧನಗರ ಜಿಲ್ಲೆಯ ಕರಿಯಾಪಟ್ಟಿ ಬಳಿಯ ಆಯನ್ ರೆಡ್ಡಿಪಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗೋಡೆಗೆ ಶಂಕು ಸ್ಥಾಪನೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳ ವಿಚಿತ್ರ ಹೇರ್​ಕಟ್​​ ಬಗ್ಗಡ ಈ ರೀತಿಯ ಹೇಳಿಕೆಯನ್ನು ಅವರು ಕೊಟ್ಟಿದ್ದಾರೆ.

ತಲೆ ಬೋಳಿಸಿ

ಸಚಿವೆ ಜಗದೀಶ್ವರಿ ಮಾತನಾಡಿ, ಶಾಲಾ ಮಕ್ಕಳು ವಿಚಿತ್ರವಾಗಿ ಹೇರ್​ ಕಟ್ ಮಾಡಿಸಿಕೊಂಡು ಬಂದರೆ..ನೋಡಿ ಒಳ್ಳೆ ರೌಡಿಗಳಂತೆ ಕಾಣುತ್ತಾರೆ. ಸೂಕ್ತವಲ್ಲದ ಹೇರ್​ ಕಟ್ ಮಾಡಿಸಿಕೊಂಡು ಶಾಲೆಗೆ ಬಂದರೆ ಅವರ ತಲೆ ಬೋಳಿಸಿ. ಇದರಲ್ಲಿ ಯಾವುದೇ ತಪ್ಪಿಲ್ಲ. ಅವರನ್ನು ನನ್ನ ಸ್ವಂತ ಮಕ್ಕಳೆಂದು ತಿಳಿದು ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟರು.

Also Read
ತಮಿಳುನಾಡು ರಾಜಕೀಯಕ್ಕೆ ಧನುಷ್​ ಪಕ್ಕಾ? ಹೀರೋ ಎಂಟ್ರಿಗೂ ಮುನ್ನವೇ ಟಿವಿಕೆ-ಡಿಎಂಕೆ ಕೌಂಟರ್ ಅಟ್ಯಾಕ್​ | Actor Dhanush ​
'ರೌಡಿಗಳಂತೆ ಕಾಣ್ತಾರೆ, ವಿಚಿತ್ರವಾಗಿ ಹೇರ್​ ಕಟ್ ಮಾಡಿಸಿಕೊಂಡಿದ್ರೆ ತಲೆ ಬೋಳಿಸಿ'; TVK ಸಚಿವೆ ಜಗದೀಶ್ವರಿ ಹೇಳಿಕೆ ವಿರುದ್ಧ DMK ಕಿಡಿ

ಮಕ್ಕಳ ಬಗ್ಗೆ ಗಮನವಿರಲಿ

ಪೋಷಕರು ಮಕ್ಕಳ ಕೇಶ ರಾಶಿ ಬಗ್ಗೆ ಗಮನಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಕ್ಕಳ ತಪ್ಪು ಹಾಗೂ ಶಾಲೆಗೆ ಇಂತಹ ಹೇರ್​ ಕಟ್ ಮಾಡಿಸಿಕೊಂಡು ಬರುವ ಪ್ರವೃತ್ತಿ ಮನೆಯಿಂದಲೇ ಶುರುವಾಗುತ್ತದೆ. ಪೋಷಕರು ಇದನ್ನು ಗಮನಿಸಿ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ಕೊಟ್ಟರು. ಈಗಿನ ಮಕ್ಕಳ ಹೇರ್​​ಸ್ಟೈಲ್​ ನೋಡಿದ್ರೆ ನನಗೆ ಭಯವಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಂತೆ ಅವರ ಕೇಶ ವಿನ್ಯಾಸ ಇದೆಯೇ ನೋಡಿ. ಮಕ್ಕಳ ಕೇಶವಿನ್ಯಾಸ ಶಿಸ್ತಿನಿಂದ ಕೂಡಿರಬೇಕು ಎಂದು ಅವರು ಹೇಳಿದರು.

ಡಿಎಂಕೆ ನಾಯಕರಿಂದ ಟೀಕೆ ವ್ಯಕ್ತ

ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್ ಈ ಬಗ್ಗೆ ಮಾತನಾಡಿದ್ದು. ಟಿವಿಕೆ ಸರ್ಕಾರವು ಮೂರ್ಖರಂತೆ ವರ್ತಿಸುತ್ತಿದೆ. ಒಬ್ಬರ ಕೇಶವಿನ್ಯಾಸ ಹೇಗಿರಬೇಕೆಂದು ನಿರ್ದೇಶಿಸಲು ಅವರಿಗೆ ಸಾಧ್ಯವಿಲ್ಲ. ಇದು ಅತ್ಯಂತ ಕೀಳು ಮಟ್ಟದ ನಡೆ. ವಿಚಿತ್ರವಾಗಿ ಹೇರ್​ಸ್ಟೈಲ್​ ಮಾಡಿಸಿಕೊಂಡವರ ತಲೆ ಬೋಳಿಸಿ ಎನ್ನುವುದು ಸರಿಯಲ್ಲ ಎಂದು ಸಚಿವೆ ಜಗದೀಶ್ವರಿ ಹೇಳಿದ್ದರ ಕುರಿತು ಕಿಡಿಕಾರಿದ್ದಾರೆ, (ಏಜೆನ್ಸೀಸ್).