ಮೀನು ಹಿಡಿಯುವಾಗ ಫಿಶರ್​ಮ್ಯಾನ್​ಮೇಲೆ ಶಾರ್ಕ್​ಡೆಡ್ಲಿ ಅಟ್ಯಾಕ್.. ಆಮೇಲೇನಾಯ್ತು?​​

sharp
Published on

ಮುಂಬೈ: ಮೀನು ಹಿಡಿಯಲಿಕ್ಕೆಂದು ನದಿಗೆ ಹೊಂದಿಕೊಂಡ ತೊರೆಗೆ ಇಳಿದ ವ್ಯಕ್ತಿ ಮೇಲೆ ಶಾರ್ಕ್ ಡೆಡ್ಲಿ ಅಟ್ಯಾಕ್ ಮಾಡಿ, ಕಾಲನ್ನು ಕಚ್ಚಿ ಕಿತ್ತುಕೊಂಡಿದೆ. ಇದರಿಂದ ಆ ವ್ಯಕ್ತಿ ಕಾಲು ಕಳೆದುಕೊಂಡಿದ್ದು, ಬಳಿಕ ಸ್ಥಳೀಯರು ನದಿಗೆ ಇಳಿದು 200 ಕೆಜಿಯ ಶಾರ್ಕ್​ಮೀನನ್ನು ಸೆರೆಹಿಡಿದಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನದಿಗೆ ಸಂಪರ್ಕವಿರುವ ತೊರೆಯಲ್ಲಿ ಈ ಘಟನೆ ನಡೆದಿದೆ.

ಮೀನುಗಾರ ವಿಕ್ಕಿ ಸುರೇಶ್​ ಗೊವಾರಿ (32) ಶಾರ್ಕ್​​ನಿಂದ ಕಾಲನ್ನು ಕಳೆದುಕೊಂಡ ವ್ಯಕ್ತಿ. ವಿಕ್ಕಿ ಸೇರಿ ಹಲವು ಮೀನುಗಾರರು ರಾತ್ರಿ ಸಮಯದಲ್ಲಿ ಮೀನುಗಳನ್ನು ಹಿಡಿಯಲೆಂದು ತೊರೆಯ ನೀರಿಗೆ ಇಳಿದಿದ್ದಾರೆ.

ಈ ವೇಳೆ ಶಾರ್ಕ್​ಆತನ ಮೇಲೆರಗಿ ಕಾಲನ್ನು ಕಿತ್ತುಕೊಂಡಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡಿರುವ ಸುರೇಶ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಗಂಭೀರವಾಗಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರೆಲ್ಲ ಒಟ್ಟುಗೂಡಿ ರಾತ್ರಿಯಲ್ಲೇ ಶಾರ್ಕ್​ಮೀನನ್ನು ಸೆರೆಹಿಡಿದು ಕೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net