

ನೈಪಿಡಾವ್: ಮಹಿಳೆಯರ ಕುರಿತು ಕೆಲ ದೇಶಗಳು ತಮ್ಮದೇ ಆದ ಕೆಲವು ಕಾನೂನು ಕಟ್ಟಳೆಯನ್ನು ಜಾರಿಗೊಳಿಸಿದೆ. ಇದು ಹೆಚ್ಚಾಗಿ ಅಫ್ಘಾನಿಸ್ತಾನದಲ್ಲೂ ನಾವು ಕಾಣುತ್ತಿದ್ದೇವೆ. ಆದರೆ ಇತರೆ ರಾಷ್ಟ್ರಗಳು ಸಹ ಇಂತಹ ಕಾನೂನು ರೂಪಿಸುವಲ್ಲಿ ಹಿಂದೆ ಬಿದ್ದಿಲ್ಲ. ಇಲ್ಲೊಬ್ಬ ವೈದ್ಯೆ ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿಕೊಂಡು ಈಗ ಶಿಕ್ಷೆಗೆ ಗುರಿಯಾಗಿದ್ದಾರೆ.
ವೈದ್ಯೆಯಾಗಿ ಸುಮ್ಮನೆ ಕೆಲಸ ಮಾಡಿಕೊಂಡು ಹೋಗಿದ್ದರೆ ಬಹುಶಃ ಈಕೆಗೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ. ತಮ್ಮ ದೇಶದ ಕಾನೂನು ಗೊತ್ತಿದ್ದರೂ ಅದನ್ನು ಉಲ್ಲಂಘನೆ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಹೌದು... ಮಯನ್ಮಾರ್ನ ಈ ವೈದ್ಯೆ ಹೆಸರು ನಂಗ್ ಮಿ ಸನ್ ಸದ್ಯ ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೇ ಈಕೆಯ ವೈದ್ಯಕೀಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು. ಈಕೆಯ ಫೋಟೋಶೂಟ್.
ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ದೇಶ ತೊರೆಯುವ ಯೋಜನೆಯಲ್ಲಿದ್ದ ಈಕೆಗೆ ಮತ್ತೊಂದು ಪೊಲೀಸರು ಮತ್ತೊಂದು ಶಾಕ್ ನೀಡಿದ್ದಾರೆ. ಅದೇನೆಂದರೆ ಈಕೆ ಇನ್ನುಮುಂದೆ ವಿದೇಶಕ್ಕೂ ಪ್ರಯಾಣ ಕೈಗೊಳ್ಳುವಂತಿಲ್ಲ.
ಈಕೆ ವೃತ್ತಿಯಲ್ಲಿ ವೈದ್ಯೆಯಾಗಿದ್ದರೂ, ಯಾವ ಮಾಡೆಲ್ಗೂ ಕಡಿಮೇಯೇನಿಲ್ಲ. ಅಂತಹ ಸೌಂದರ್ಯ ಹೊಂದಿರುವ ಈಕೆಗೆ ಮಾಡೆಲ್ ರೀತಿ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಸಿಯೇಬಿಟ್ಟಳು. ಅದನ್ನು ಅಪ್ಲೋಡ್ ಮಾಡಿದ್ದೇ ತಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯಿತು. ಇದು ಈಕೆಗೆ ಈಗ ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.
ಇಸ್ಲಾಮಿಕ್ ದೇಶಗಳಲ್ಲಿ ಮಹಿಳೆಯರು ಇಂತಹ ಬಟ್ಟೆ ಧರಿಸಿ ದೇಶ ಪ್ರದರ್ಶಿಸುವುದು ಅಪರಾಧ. ಹಾಗಾಗಿ ಈಕೆ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. (ಏಜೆನ್ಸೀಸ್)