ಷೇರು ಬೆಲೆ 11ರಿಂದ 570 ರೂಪಾಯಿಗೆ ಏರಿಕೆ: ಒಂದೇ ವರ್ಷದಲ್ಲಿ 1 ಲಕ್ಷವಾಯ್ತು 52 ಲಕ್ಷ

stock morket
Published on

ಮುಂಬೈ: ಹಾಸ್ಪಿಟಲಿಟಿ (ಆತಿಥ್ಯ) ಕ್ಷೇತ್ರದಲ್ಲಿ ವ್ಯವಹರಿಸುವ ಎರಾಯಾ ಲೈಫ್‌ಸ್ಪೇಸ್ ಲಿಮಿಟೆಡ್​ (Eraaya Lifespaces Ltd) ಎಂಬ ಸಣ್ಣ ಕಂಪನಿಯ ಷೇರುಗಳು ಕೇವಲ ಒಂದು ವರ್ಷದಲ್ಲಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿವೆ. ಕಂಪನಿಯ ಷೇರುಗಳು ಹೂಡಿಕೆದಾರರಿಗೆ ಒಂದು ವರ್ಷದಲ್ಲಿ 5000% ಲಾಭವನ್ನು ನೀಡಿವೆ.

ಕಳೆದ ಒಂದು ವರ್ಷದಲ್ಲಿ ಎರಾಯಾ ಲೈಫ್‌ಸ್ಪೇಸ್‌ನ ಷೇರುಗಳ ಬೆಲೆ 11 ರಿಂದ 500 ರೂ.ಗೆ ಏರಿಕೆಯಾಗಿದೆ. ಎರಾಯಾ ಲೈಫ್‌ಸ್ಪೇಸ್‌ನ ಷೇರುಗಳ ಬೆಲೆ ಮಂಗಳವಾರ, ಏಪ್ರಿಲ್ 30 ರಂದು ಶೇಕಡಾ 1.99ರಷ್ಟು ಏರಿಕೆಯಾಗಿ 573.35 ರೂ. ತಲುಪಿತು. ಇದು ಈ ಷೇರಿನ 52 ವಾರಗಳ ಹೊಸ ಗರಿಷ್ಠ ಬೆಲೆಯಾಗಿದೆ. ಈ ಷೇರಿನ 52 ವಾರಗಳ ಕನಿಷ್ಠ ಬೆಲೆ 10.98 ರೂ. ಇದೆ.

ಈ ಷೇರುಗಳು ಕಳೆದ ಒಂದು ವರ್ಷದಲ್ಲಿ ಪ್ರಚಂಡ ಲಾಭವನ್ನು ನೀಡಿವೆ. ಕಂಪನಿಯ ಷೇರುಗಳ ಬೆಲೆ ಮೇ 15, 2023 ರಂದು 10.98 ರೂ. ಇತ್ತು. ಈಗ 573.35 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 5121% ಹೆಚ್ಚಾಗಿದೆ. ಒಬ್ಬ ವ್ಯಕ್ತಿಯು ಮೇ 15, 2023 ರಂದು ಈ ಷೇರುಗಳಲ್ಲಿ 1 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೆ ಮತ್ತು ತನ್ನ ಹೂಡಿಕೆಯನ್ನು ಉಳಿಸಿಕೊಂಡಿದ್ದರೆ, ಈ ಷೇರುಗಳ ಪ್ರಸ್ತುತ ಮೌಲ್ಯವು 52.21 ಲಕ್ಷ ರೂಪಾಯಿಗಳಾಗಿರುತ್ತದೆ.

ಈ ಷೇರುಗಳ ಬೆಲೆ ಕಳೆದ 6 ತಿಂಗಳಲ್ಲಿ 985% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಕಂಪನಿಯ ಷೇರುಗಳ ಬೆಲೆ ನವೆಂಬರ್ 2, 2023 ರಂದು 52.80 ರೂ. ಇತ್ತು. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಈ ಷೇರುಗಳ ಬೆಲೆ 393% ಹೆಚ್ಚಾಗಿದೆ. ಕಂಪನಿಯ ಷೇರುಗಳ ಬೆಲೆ ಜನವರಿ 1, 2024 ರಂದು ವರ್ಷದ ಆರಂಭದಲ್ಲಿ ರೂ 116.25 ಇತ್ತು. ಕಳೆದ ಒಂದು ತಿಂಗಳಲ್ಲಿ ಈ ಷೇರುಗಳ ಬೆಲೆ 43% ರಷ್ಟು ಏರಿಕೆ ಕಂಡಿದೆ.

ಹಾಸ್ಪಿಟಾಲಿಟಿ (ಆತಿಥ್ಯ ವಲಯ) ವ್ಯವಹಾರವನ್ನು ಪ್ರವೇಶಿಸಿರುವುದಾಗಿ ಎರಾಯಾ ಲೈಫ್‌ಸ್ಪೇಸ್ ಲಿಮಿಟೆಡ್​ ಕಂಪನಿಯು ಷೇರು ಮಾರುಕಟ್ಟೆ ತಿಳಿಸಿದೆ. ಕಂಪನಿಯು ಪುಣೆ ಬಳಿಯ ಲೋನಾವಾಲಾದಲ್ಲಿದೆ. ರಜಾಕಾಲೀನ ವಿಹಾರಕ್ಕಾಗಿ ಐಷಾರಾಮಿ ಆಸ್ತಿಯನ್ನು ಖರೀದಿಸಿದೆ. ಇದಲ್ಲದೆ, ಕಂಪನಿಯು ಮೊಹಾಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಮಾಲ್‌ನಲ್ಲಿ ವಾಣಿಜ್ಯ ರಿಟೇಲ್​ ಸ್ಥಳವನ್ನು ಸಹ ಖರೀದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net