ಹೊಂಬುಜ ಕ್ಷೇತ್ರದಲ್ಲಿ ಶರನ್ನವರಾತ್ರಿ

rpt dasara
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಶ್ರೀಪದ್ಮಾವತಿ ದೇವಿಗೆ ಸಹಸ್ರ ಕುಂಕುಮಾರ್ಚನೆ ನೆರವೇರಿತು.
Published on

ರಿಪ್ಪನ್‌ಪೇಟೆ: ಶರನ್ನವರಾತ್ರಿಯ ದ್ವಿತೀಯ ದಿನವಾದ ಶುಕ್ರವಾರ ಧಾರ್ಮಿಕ ವಿಧಿಗಳು ಆಗಮೋಕ್ತ ಶಾಸ್ತ್ರದನ್ವಯ ಹೊಂಬುಜ ಶ್ರೀಮಠದಲ್ಲಿ ಪೀಠಾಧೀಶ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನೆರವೇರಿತು.

ನಂತರ ಆಶೀರ್ವಚನ ನೀಡಿದ ಶ್ರೀಗಳು, ಭಕ್ತರ ಅಚಲ ಭಕ್ತಿಯಿಂದ ಸಹಸ್ರನಾಮ, ಕುಂಕುಮಾರ್ಚನೆ ಮಾಡಿರುವುದರಿಂದ ಸಾಮರಸ್ಯದ ಜೀವನ ನಿರ್ವಹಣೆಗೆ ಪೂರಕವಾಗಿರುತ್ತದೆ. ಮಾನವನ ಜೀವನ ಲೋಕದ ಎಲ್ಲ ಜೀವಿಗಳ ಬದುಕಿಗಿಂತ ಶ್ರೇಷ್ಠವೆಂದು ಪೂರ್ವಾಚಾರ್ಯರು ಹೇಳಿದ್ದಾರೆ. ಅಂತೆಯೇ ವಿದ್ಯೆ, ಬುದ್ಧಿ ಮತ್ತು ವಿವೇಕವಂತನಾಗಿ ತನ್ನ ಬದುಕನ್ನು ನಿರ್ಮಿಸಿಕೊಳ್ಳುವ ಗುರಿ ಮನುಷ್ಯರದ್ದಾಗಿರುತ್ತದೆ. ಈ ಪ್ರಯತ್ನದ ಸಾಫಲ್ಯಕ್ಕೆ ಹಣ, ಸಂಪತ್ತನ್ನು ಆಪೇಕ್ಷಿಸುತ್ತಾನೆ. ದಾನ ಧರ್ಮದ ಮೂಲಕ ಧರ್ಮ ಕಾರ್ಯಗಳಲ್ಲಿ ಸಂಪತ್ತನ್ನು ವಿನಿಯೋಗಿಸಿ ಪುಣ್ಯವನ್ನು ಪಡೆಯಿರಿ ಎಂದರು.
ಮಂತ್ರಾಕ್ಷತೆ ನೀಡಿ ಭಕ್ತರನ್ನು ಹರಸಿದರು. ಪದ್ಮಾವತಿ ದೇವಿಯನ್ನು ಪುಷ್ಪ-ಫಲ, ಸುವರ್ಣ, ರಜತ ಆಭರಣಗಳಿಂದ ಶೋಭಾಯಮಾನವಾಗಿ ಅಲಂಕರಿಸಲಾಗಿತ್ತು. ಶ್ರೀ1 05 ಶಿವಮತಿ ಮಾತಾಜಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net