ಶಾರದಾ ಭರತನಾಟ್ಯ ಕಲಾ ಶಾಲೆ ವಿದ್ಯಾರ್ಥಿನಿಯರ ಉತ್ತಮ ಸಾಧನೆ

7-RNR-06
Published on

ರಾಣೆಬೆನ್ನೂರ: ನಗರದ ಶ್ರೀ ಶಾರದಾ ಭರತನಾಟ್ಯ ಕಲಾ ಶಾಲೆಯ ವಿದ್ಯಾರ್ಥಿನಿಯರು ಪುಣೆ ನಗರದಲ್ಲಿ ಅಖಿಲ ಭಾರತೀಯ ಸಾಂಸ್ಕೃತಿಕ ಸಂಘ, ಆಫೀಷಿಯಲ್ ಪಾರ್ಟನರ್ ಆಫ್ ಯುನೆಸ್ಕೋ ಆಯೋಜಿಸಿದ್ದ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಥೈಲ್ಯಾಂಡ್ ದೇಶದ ಬ್ಯಾಂಕಾಕ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಉತ್ತಮ ಸಾಧನೆ ಮಾಡಿದ್ದಾರೆ.
ರವೀನಾ ಎಂ.ಡಿ., ಕಾವ್ಯಾ ಹಳಿಂಗಳಿ, ನವ್ಯಾ ಹಳಿಂಗಳಿ, ಕಂಗನಾ ಬಂಗಾರಿ, ರಾಶಿ ದೇವರಡ್ಡಿ, ಅಪೇಕ್ಷಾ ಬಗಾಡೆ, ಜಯಲಕ್ಷ್ಮೀ ಗುಂಡಪಲ್ಲಿ, ವರ್ಷಿಣಿ ಎ.ಎಂ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದು ಮುಂದಿನ ದಿನಗಳಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ನೃತ್ಯ ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net