300ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ

HUN-JAN-13-2(HEALTH CAMP)
Published on

ಹುಣಸೂರು: ತಾಲೂಕು ಶಾಮಿಯಾನ ಮಾಲೀಕರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ 300ಕ್ಕೂ ಹೆಚ್ಚಿನ ಜನರು ಪರೀಕ್ಷಿಸಿಕೊಂಡರು.

ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಣ್ಣು, ದಂತ ಮುಂತಾದ ವಿಭಾಗಗಳಲ್ಲಿ ಸಾರ್ವಜನಿಕರು ತಪಾಸಣೆ ಮಾಡಿಸಿಕೊಂಡರು. ಗಾವಡಗೆರೆ ಶ್ರೀಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯ ನಿರ್ವಹಣೆ ಕುರಿತಾದ ಅರಿವು ಸಾರ್ವಜನಿಕರಲ್ಲಿ ಇತ್ತೀಚೆಗೆ ಹೆಚ್ಚಾಗಿದೆ. ಸಂಘ-ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಮಾದರಿಯ ಕಾರ್ಯವಾಗಿದೆ. ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯ ಕಾಪಾಡುವುದರಿಂದ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ. ನಮ್ಮ ನೆಲದ ಆಹಾರ ಪದ್ಧತಿಯನ್ನು ಅನುಸರಿಸುವುದು ಅಗತ್ಯ ಎಂದರು.

ತಾಲೂಕಿನ ಪ್ರಗತಿಪರ ರೈತ ಮಹದೇವೇಗೌಡ, ಪ್ರಭಾಕರ ಆರಾಧ್ಯ ಹಾಗೂ ಮಾಜಿ ಸೈನಿಕ ರಾಯಪ್ಪ, ವೆಂಕಟೇಶಪ್ರಸಾದ್, ಪೌರಕಾರ್ಮಿಕ ಮಂಜು, ಮಾದೇಶ, ರಾಮು ಹಾಗೂ ಕಲ್ಯಾಣಮಂಟಪಗಳಲ್ಲಿ ಪಾತ್ರೆ ತೊಳೆಯುವ ವೃತ್ತಿ ನಡೆಸುವ ಶಾತಾಜ್, ಶಾರದಮ್ಮ, ಲಕ್ಷ್ಮಮ್ಮ, ನಾಗಮ್ಮ ಮತ್ತು ಪಾರ್ವತಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಡಾ.ಶುಶ್ರುತ್‌ಗೌಡ ಅವರ ತಂಡ ತಪಾಸಣೆ ನಡೆಸಿತು. ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷ ಆಕೀಬ್ ಅಸ್ಪಾರ್, ಉಪಾಧ್ಯಕ್ಷ ಪಿ.ಸತೀಶ್, ಗೌರವಾಧ್ಯಕ್ಷ ಮೋಹನ್, ಕಾರ್ಯದರ್ಶಿ ರಹಮತ್, ಖಜಾಂಚಿ ರಿಜ್ವಾನ್, ಸಂಘಟನಾ ಕಾರ್ಯದರ್ಶಿ ಗೌರೀಶ್ ಗದ್ದಿಗೆ, ಸದಸ್ಯ ಅಲ್ತಾಫ್ ಅಹಮದ್, ಸುಹೈಲ್, ಅಜಮಲ್, ರಾಫಿಲ್, ವೈದ್ಯ ಡಾ.ಲಿಂಗಾಚಾರಿ, ಡಾ.ಸ್ಮಿತಾ, ಡಾ.ನಿವೇದಿತಾ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net