

ಬೆಂಗಳೂರು: ಹದಿನೈದನೇ ದಿನಕ್ಕೆ ಶಕ್ತಿ ಯೋಜನೆ ಕಾಲಿಟ್ಟಿದ್ದು ಈವರೆಗೆ ಒಟ್ಟು ಮಹಿಳಾ "ಶಕ್ತಿ" ಸಂಚಾರದ ಮೌಲ್ಯ 179ಕೋಟಿ ರೂ. ದಾಟಿದೆ!
ಸಾರಿಗೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಏರಿಕೆಯಾಗುತ್ತಿತ್ತು. ಆದರೆ ನಿನ್ನೆ ಮಾತ್ರ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ, ಆದರೂ ಖರ್ಚು ಮಾತ್ರ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದಾಗ ತಿಳಿದದ್ದು ಮಹಿಳೆಯರು, ದೂರದೂರಿನ ಪ್ರಯಾಣವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ ಎಂದು!
ಕಳೆದ ಹದಿನಾಲ್ಕು ದಿನಗಳಲ್ಲಿ 7,64,40,526 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆ ಅಡಿಯಲ್ಲಿ 25ರಂದು ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ ಹೀಗಿದೆ:
ಒಟ್ಟು ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ- 48,81,751 ನಿನ್ನೆಯ ಒಟ್ಟು ಮಹಿಳೆಯರ ಪ್ರಯಾಣದ ಮೌಲ್ಯ-13,18,80,884
ಜೂನ್ 11ರಿಂದ 25ರ ವರೆಗೂ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ- 7,64,40,526
ಒಟ್ಟು 14 ದಿನಗಳ ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 179,28,08,410