ಮಾಜಿ ದಿವಾನ್​ ಇಸ್ಮಾಯಿಲ್ ಮೊಮ್ಮಗಳ ಕೊಲೆ ಪ್ರಕರಣ: ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ ಅಪರಾಧಿ

ismayil pic
Published on

ಬೆಂಗಳೂರು: ಬೆಂಗಳೂರಿನಲ್ಲಿ 1991 ರಲ್ಲಿ ನಡೆದಿದ್ದ ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಮೊಮ್ಮಗಳು ಶಕೀರಾ ಕೊಲೆ ಪ್ರಕರಣದ ಪ್ರಧಾನ ಅಪರಾಧಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾನೆ.

ಪ್ರಕರಣದ ಅಪರಾಧಿ ಶ್ರದ್ಧಾನಂದ (83 ವರ್ಷ) ಬದುಕಿರುವವರೆಗೂ ಜೈಲಿನಲ್ಲಿರುವಂತೆ 2008ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರಸ್ತುತ ಶ್ರದ್ಧಾನಂದ ಮಧ್ಯ ಪ್ರದೇಶದ ಸಾಗರ್ ಜಿಲ್ಲಾ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಸನ್ನಡತೆ ಆಧಾರದಲ್ಲಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲಿರುವ ಅಪರಾಧಿ, ಬೆಂಗಳೂರಿನ ರಿಚ್ಮಂಡ್ ರಸ್ತೆಯ 600 ಕೋಟಿ ರೂ. ಆಸ್ತಿಗಾಗಿ ಕಣ್ಣಿಟ್ಟು, ತನ್ನ ಪತ್ನಿ ಶಕೀರಾಳನ್ನು ಕೊಲೆ ಮಾಡಿದ್ದನು. ಅಪರಾಧಿ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರುಳಿ ಮನೋಹರ್ ಮಿಶ್ರಾ ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದಾನೆ.

ಪ್ರಕರಣದ ಹಿನ್ನೆಲೆ:

1986 ರಲ್ಲಿ ಶಕೀರಾ ಕಲಲಿ ಎಂಬುವರ ಜೊತೆ ಶ್ರದ್ಧಾನಂದ ವಿವಾಹವಾಗಿದ್ದನು. ಶಕೀರಾ ಕಲಲಿ ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಮೊಮ್ಮಗಳು ಕೂಡ ಹೌದು. 1991 ರಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಶಕೀರಾ, 1994 ರಲ್ಲಿ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.

ಮನೆ ಹಿಂಭಾಗವೇ ಪತ್ನಿ ಹೆಣ:

ಪತ್ನಿಯನ್ನು ಹತ್ಯೆಗೈದ ಅಪರಾಧಿ ಪತಿ ಮನೆಯ ಗೋಡೆ ಹಿಂಭಾಗವೇ ಹೂತಿಟ್ಟಿದ್ದ, ನಂತರ ಪ್ರಕರಣ ಬೆಳಕಿಗೆ ಬಂದು ಆತನ ಬಂಧನವಾಯಿತು. 2000 ಇಸವಿಯಲ್ಲಿ ಕೋರ್ಟ್ ಈ ಬಗ್ಗೆ ಸೂಕ್ಷ್ಮವಾಗಿ ವಿಚಾರಣೆ ನಡೆಸಿತು. 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಶ್ರದ್ಧಾನಂದ, ಬಳಿಕ ಬೆಂಗಳೂರಿನ ಪರಪ್ಪನ ಅಗ್ರಗಾರ ಜೈಲಿನಲ್ಲಿದ್ದನು. 2011 ರಲ್ಲಿ ಆತನ ಮನವಿ ಮೇರೆಗೆ ಮಧ್ಯಪ್ರದೇಶದ ಜೈಲಿಗೆ ಆತನನ್ನು ಶಿಫ್ಟ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net