'ಜವಾನ್' ಸಕ್ಸಸ್​ ಬೆನ್ನಲ್ಲೇ ಶಾರೂಖ್​ ಖಾನ್​ಗೆ ಜೀವ ಬೆದರಿಕೆ!; Y+ ಭದ್ರತೆ ಕೊಟ್ಟ ಮಹಾರಾಷ್ಟ್ರ ಸರ್ಕಾರ

Untitled design - 2023-10-09T095900.612
Published on

ಮಹಾರಾಷ್ಟ್ರ: ಬಾಲಿವುಡ್ ಕಿಂಗ್​ ಖಾನ್​, ನಟ ಶಾರುಖ್ ಖಾನ್ ಅಭಿನಯದ 'ಜವಾನ್'​ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕೆಲೆಕ್ಷನ್​ ಗಳಿಸುವ ಮುಖೇನ ಹಿಂದಿ ಭಾಷೆಯಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿತು. ಈ ಚಿತ್ರದಿಂದ ನಟನಿಗೆ ವ್ಯಾಪಕ ಪ್ರಶಂಸೆ ಹರಿದುಬಂದಿದ್ದು, ಇದರ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ಕಿಂಗ್​ ಖಾನ್​ಗೆ ಜೀವ ಬೆದರಿಕೆ ಹಾಕಿದ್ದಾರೆ.

ಶಾರೂಖ್​ ಖಾನ್​ ಅಭಿನಯದ 'ಪಠಾಣ್' ಮತ್ತು 'ಜವಾನ್' ಸಿನಿಮಾಗಳ​​ ಯಶಸ್ಸಿನ ನಂತರ ನಟನಿಗೆ ಕೊಲೆ ಬೆದರಿಕೆಗಳನ್ನು ಬಂದಿವೆ. ಲಿಖಿತ ದೂರಿನ ಮೇರೆಗೆ ಇದೀಗ ಮಹಾರಾಷ್ಟ್ರ ರಾಜ್ಯ ಸರ್ಕಾರವು ಶಾರೂಖ್​ಗೆ ಭದ್ರತಾ ಮಟ್ಟವನ್ನು Y+ ವರ್ಗಕ್ಕೆ ಅಪ್‌ಗ್ರೇಡ್ ಮಾಡಲು ಆದೇಶವನ್ನು ಹೊರಡಿಸಿದೆ.

ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಐಜಿ ವಿಐಪಿ ಭದ್ರತೆಯು ಶಾರುಖ್ ಖಾನ್ ಅವರ ಭದ್ರತೆಯನ್ನು ಮೇಲ್ದರ್ಜೆಗೇರಿಸಿದೆ. ಭದ್ರತಾ ಸೇವೆಗೆ ಖಾಸಗಿಯಾಗಿ ಹಣ ನೀಡಲಾಗುವುದು ಮತ್ತು ಸಂಬಂಧಿತ ವೆಚ್ಚಗಳನ್ನು ಭರಿಸಲು ನಟ ಜವಾಬ್ದಾರರಾಗಿದ್ದು, ರಾಜ್ಯ ಸರ್ಕಾರಕ್ಕೆ ಮೊತ್ತವನ್ನು ಪಾವತಿಸುತ್ತಾರೆ. ಹೆಚ್ಚಿನ ಬೆದರಿಕೆ ಗ್ರಹಿಕೆಯನ್ನು ಎದುರಿಸುತ್ತಿರುವ ಜನರಿಗೆ ವೈ-ಪ್ಲಸ್ ಭದ್ರತೆಯನ್ನು ನೀಡಲಾಗುತ್ತದೆ.

ಶಾರುಖ್ ಖಾನ್ ಅಭಿನಯದ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ 'ಜವಾನ್' ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1103.27 ಕೋಟಿ ರೂ. ಗಳಿಸಿದೆ ಎಂದು ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಇತ್ತೀಚೆಗಷ್ಟೇ ಅಧಿಕೃತವಾಗಿ ಘೋಷಿಸಿದೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್, ಮುಖೇಶ್ ಛಾಬ್ರಾ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net